ಕೋಲ್ಯ ಹುಡುಗಿಯ ಮುಂಗುರುಳು ಸರಿಸಿ ಹೇಳಿದ: ಈ ಹಗಲು, ಈ ಇರುಳು, ಈ ಬೆಳದಿಂಗಳು, ಆ ಚಂದ್ರ, ಈ ನದಿ, ಈ ತಂಗಾಳಿ, ಆ ತಾರೆ, ಈ ಕಿನಾರೆ...
ಹುಡುಗಿ: ಲೋ ಪ್ರೀತಿ ಮಾಡ್ತಿದೀಯೋ ಅಥವಾ ಪರಿಸರ ವಿಜ್ಞಾನದ ಪಾಠ ಹೇಳ್ತಿದೀಯೋ?
------
ಬಾಸ್: ನೋಡಿ, ಇದು ನಿಮ್ಮ ಸಂಬಳದಲ್ಲಿ ಆದ ಹೆಚ್ಚುವರಿ. ಈ ಬಗ್ಗೆ ಪತ್ರ ನೀಡುತ್ತಿದ್ದೇನೆ. ಇದನ್ನು ಉಳಿದ ಉದ್ಯೋಗಿಗಳಿಗೆ ತೋರಿಸಬೇಡಿ. ಆ ಬಗ್ಗೆ ಚರ್ಚಿಸಬೇಡಿ.
ಉದ್ಯೋಗಿ: ಚಿಂತೆ ಮಾಡ್ಬೇಡಿ ಸರ್. ಈ ಬಗ್ಗೆ ನಿಮಗಿರುವಷ್ಟೇ ನಾಚಿಕೆ ನನಗೂ ಇದೆ.