ಕಂಜೂಸ್ ಕೋಲ್ಯನ ಮನೆಗೆ ಬೆಂಕಿ ಹೊತ್ತಿಕೊಂಡಿತು. ಕೋಲ್ಯ ಹೇಗೋ ಬದುಕುಳಿದನಾದರೂ ಮುಖ ಅಲ್ಲಲ್ಲಿ ಸುಟ್ಟುಹೋಗಿತ್ತು.
ಕೋಲ್ಯ: ಡಾಕ್ಟರ್ ಸಾಹಬ್, ಪ್ಲಾಸ್ಟಿಕ್ ಸರ್ಜರಿ ಮಾಡ್ಸಿದ್ರೆ ಎಷ್ಟು ಖರ್ಚಾಗಬಹುದು?
ಡಾಕ್ಟರ್: ಆಗುತ್ತೆ ಒಂದು 5 ಲಕ್ಷ ರುಪಾಯಿ! ಔಷಧಿ ಖರ್ಚು ಅದೂ ಇದೂ ಅಂತ ಎಕ್ಸ್ಟ್ರಾ 1 ಲಕ್ಷ ದಾಟಬಹುದು.
ಕೋಲ್ಯ(ಯೋಚಿಸಿ): ಒಂದ್ವೇಳೆ ಪ್ಲಾಸ್ಟಿಕ್ ನಾನೇ ತಂದು ಕೊಟ್ರೆ ಎಷ್ಟು ಚಾರ್ಜ್ ಮಾಡ್ತೀರಾ?