ಓಂಚನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 9901257131
ಸೌಂದರ್ಯವರ್ಧಕಗಳ ಜಾಹೀರಾತಿಗೆ ಬರೀ ಯುವತಿಯರನ್ನೇ ಉಪಯೋಗಿಸಿಕೊಳ್ಳುತ್ತಾರಲ್ಲ. ಯುವಕರೇನು ಮಾಡಿದ್ದರು?
ಯುವಕರು ಸೌಂದರ್ಯ ಆರಾಧಕರು!
ಪ್ರಶಾಂತ ಹೆಗಡೆ, ಮಲ್ಲೇಶ್ವರಂ
ದಿಗ್ವಿಜಯ್ ಸಿಂಗ್ ಮತ್ತು ಅಮೃತಾ ಅವರ ಪ್ರಕರಣದಿಂದ ತಿಳಿದುಬರುವ ನೀತಿಯೇನು?
ಅಪ್ಪಿಕೊಂಡ ಮೇಲೆ ಒಪ್ಪಿಕೊಳ್ಳಲೇಬೇಕು!
ಎ.ಎಚ್. ಪ್ರಕಾಶಕುಮಾರ್, 9886016328
ಚಿತ್ರರಂಗದಿಂದ ನಟ ನಟಿಯರು ರಾಜಕೀಯಕ್ಕೆ ಆಗಮಿಸುತ್ತಿದ್ದಾರೆ. ರಾಜಕೀಯದಲ್ಲಿ ಅಂತಹ ಶಕ್ತಿ ಏನಿರಬಹುದು?
ಡಿಗ್ಗಿಯನ್ನು ನೋಡಿದರೆ ನನಗೂ ಅನುಮಾನವಾಗುತ್ತಿದೆ. ಅಂತಹ ಶಕ್ತಿ ಏನಿರಬಹುದು!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಬರವಣಿಗೆ ನಿಲ್ಲಿಸಿ, ರಾಜಕೀಯ ಮಾಡಲು ಹೊರಟಿರುವ ಸಾಹಿತಿಗಳು ಯಶಸ್ವಿಯಾಗುವರೇ?
ವಯಸ್ಸು ಮುಗಿಯುತ್ತ ಬಂದಿರುವಾಗ ಯುವತಿಯನ್ನು ವರಿಸುವ ದಿಗ್ವಿಜಯ್ ಥರದ ವರ್ತನೆ!
ಬೆಮೆಲ್ ದೇವೇಗೌಡ, ಹೆಬ್ಬಾಳು, ಮೈಸೂರು
ಬ್ಲ್ಯಾಕ್ ಮೇಲ್ ಅಪರಾಧವಾದರೆ, ವೈಟ್ ಮೇಲ್?
ಇದ್ದಿದ್ದನ್ನು ಇದ್ದ ಹಾಗೆ ಹೇಳುವುದು ಶ್ವೇತಪತ್ರ!
- ಬಾಣಭಟ್ಟ