ಯಾರ ದೇಶ ಬಹಳ ಮುಂದುವರಿದಿದೆ ಎನ್ನುವುದರ ಬಗ್ಗೆ ಕೋಲ್ಯ ಮತ್ತು ಚೀನಿಯೊಬ್ಬನ ನಡುವೆ ವಾದ ಶುರುವಾಯಿತು.
ಚೀನಿ: ನಮ್ಮ ದೇಶದಲ್ಲಿ ತಲೆಯೆತ್ತಿ ಮೇಲೆ ನೋಡಿದರೆ ಸಾಕು ವಿಮಾನ ಹಾರೋದು ಕಾಣ್ಸುತ್ತೆ... ಐದೈದು ನಿಮಿಷಕ್ಕೆ ಒಂದೊಂದು ಪ್ಲೇನು ಹಾರಸ್ತೀವಿ ನಾವು.
ಕೋಲ್ಯ(ಎದುರಿಗಿದ್ದ ಏರ್ಟೆಲ್ ಟವರ್ ತೋರಿಸುತ್ತಾ): ನಮ್ಮಲ್ಲಿ ಎಷ್ಟು ವಿಮಾನಗಳಿವೆಯಂದ್ರೆ, ಅಲ್ನೋಡು ಅವುಗಳಿಗೂ ನಾವು ಟ್ರಾಫಿಕ್ ಸಿಗ್ನಲ್ ಹಾಕಿದ್ದೇವೆ!