ಅವಳು ಹೊಳೆವ ಮೂಗುತಿಯಾದರೆ. ನಾನು?

Updated on: 

ಚಂದ್ರಪೂಜಾರಿ, ಕುಂದಾಪುರ, 9731819756
ಬಾಯಲ್ಲಿ ಬರೀ 2 ಹಲ್ಲುಗಳಿದ್ದಿದ್ದರೆ ಗಟ್ಟಿ ವಸ್ತುಗಳನ್ನು ತಿನ್ನಲು ಸಾಧ್ಯವಾಗುತ್ತಿತ್ತಾ?
ಮನಸ್ಸು ಗಟ್ಟಿ ಇದ್ದರೆ ಸಾಧ್ಯವಿದೆ ಅಂದರಂತೆ ರಾಗಾ!


ಚಂದ್ರಶೇಖರ, ಮಹಾಲಕ್ಷ್ಮೀ ಬಡಾವಣೆ, ಬೆಂಗಳೂರು
ಅವಳು ಹೊಳೆವ ಮೂಗುತಿಯಾದರೆ. ನಾನು?
ಸೋರುವ ಮೂಗು!


ಐಗೂರು ಮೋಹನದಾಸ್, ಸೋಮವಾರಪೇಟೆ, 9483327936
ಪತ್ನಿ ಪೀಡಿತನಾಗಿರುವ ನನಗೆ ನಿತ್ಯ ಲಟ್ಟಣಿಗೆಯಿಂದ ಭಾರಿಸುವ ನನ್ನಾಕೆಗೆ ಬುದ್ದಿ ಕಲಿಸುವ ಐಡಿಯಾ ತಿಳಿಸುವಿರಾ?
ಲಟ್ಟಣಿಗೆ ಅಡಗಿಸಿಟ್ಟು ಕುಕ್ಕರ್ನಲ್ಲಿ ಏಟು ತಿನ್ನುವುದಕ್ಕಿಂತ ಲಟ್ಟಣಿಗೆಯೇ ವಾಸಿ!


ಚಂದ್ರಪೂಜಾರಿ, ಕುಂದಾಪುರ, 9731819756
ಕೋಳಿ ಮೊದಲೋ, ಮೊಟ್ಟೆ ಮೊದಲೋ?
ತಿನ್ನೋರಿಗೆ ಯಾವುದು ಮೊದಲಾದರೇನು!



ಬರ್ಕಲಿರಮೇಶ, ಮಂಡ್ಯ, 9008741348
ನಿಮ್ಮ ಪತ್ರಿಕೆಯಲ್ಲಿ ವರದಿಗಾರನಾಗಿ ಸೇರಬೇಕೆಂದುಕೊಂಡಿದ್ದೇನೆ. ನಿಮ್ಮ ಅಭಿಪ್ರಾಯವೇನು?
ಸದ್ಯ ಈಗಲಾದರೂ ನನ್ನ ಅಭಿಪ್ರಾಯ ಕೇಳಿದೆಯಲ್ಲ!


 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com