ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ. ಯಶಸ್ವಿ ಮಹಿಳೆ ಹಿಂದೆ?
ರೇಣುಕಾಚಾರ್ಯ ಅಂತ ಯಾರೋ ಕೂಗಿದ ಹಾಗಾಯ್ತು!
ಆರ್.ಬಿ.ಸಿ. ಕೆ.ಆರ್. ನಗರ
ಮತಕ್ಕಾಗಿ ಜಾತಿಯ ಹೆಸರಿನಲ್ಲಿ ಜನರನ್ನು ಓಡೆಯುತ್ತಿದ್ದ ರಾಜಕಾರಣಿಗಳು ಈಗ ಪರರ ಪತ್ನಿಯ ಮೇಲಿನ ಆಸೆಗಾಗಿ ಬೇರೆಯವರ ಸಂಸಾರವನ್ನೇ ಒಡೆಯುತ್ತಿದ್ದಾರಲ್ಲಾ?
ಜನರನ್ನೇ ಒಡೆದವರಿಗೆ ಸಂಸಾರ ಯಾವ ಲೆಕ್ಕ?
ಬರ್ಕಲಿರಮೇಶ, 9008741348
- ಎಲ್ಲಾದರೂ ಇರು, ಹೇಗಾದರೂ ಇರು, ತಿಂಗಳಿಗೆ ಹತ್ತತ್ತು ಸಾವಿರ ಕಳಿಸ್ತಾ ಇರು ಅಂತಾಳಲ್ಲಾ?
ಹತ್ತೇ ಸಾವಿರ ಕೇಳ್ತಾಳಲ್ಲ ಅಂತ ಸಮಾಧಾನ ಮಾಡ್ಕೋಬೇಕು!
ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9901257131
ಕೆಲವರು ಬೀದೀಲಿ ಹುಲಿಯಂತಿರುತ್ತಾರೆ. ಮನೇಲಿ ಯಾಕೆ ಇಲಿಯಾಗಿರ್ತಾರೆ?
ಮನೆಯಲ್ಲಿ ದುರ್ಗೆ ಇರುತ್ತಾಳೆ!
ತಲವಾಟ್ ಮಂಜುನಾಥ, 9480931611
ಕುರ್ಚಿಗೆ ಅಂಟಿಕೊಳ್ಳುವುದಕ್ಕೂ ಪ್ರೀತಿಗೆ ಅಂಟಿಕೊಳ್ಳುವುದಕ್ಕೂ ಏನು ವ್ಯತ್ಯಾಸ?
ಕುರ್ಚಿ ಅಧಿಕಾರಕ್ಕೆ, ಪ್ರೀತಿ ಅಧಿಕಾರ ಕಳೆದುಕೊಳ್ಳಲು!
- ಬಾಣಭಟ್ಟ