ಹೆಂಡತಿ: ನಿಮ್ಮ ದಿನ ದಿನದ ಹುಚ್ಚಾಟ ನೋಡಿ ನನಗಂತೂ ಸಾಕಾಗಿ ಹೋಗಿದೆ. ನನಗೆ ಡಿವೋರ್ಸ್ ಬೇಕು...
ಗಂಡ: ತೊಗೋ..ಈ ಚಾಕ್ಲೆಟ್ ತಿನ್ನು.
ಹೆಂಡತಿ(ರೊಮ್ಯಾಂಟಿಕ್ ಆಗಿ): ನನ್ನ ರಮಿಸೋಕೆ ಚಾಕ್ಲೆಟ್ ಕೊಡ್ತಿದೀರಾ?
ಗಂಡ: ಅಲ್ವೇ ಹುಚ್ಚಿ. ಯಾವ್ದಾದ್ರೂ ಒಳ್ಳೆ ಕೆಲಸ ಮಾಡೋದಕ್ಕೆ ಮುನ್ನ ಸಿಹಿ ತಿನ್ನಬೇಕು ಅಂತ ನನ್ನ ಅಜ್ಜಿ ಹೇಳ್ತಿದ್ಲು!
ಹುಡುಗಿ: ಏ ನಿನ್ನ ಫೋನ್ ತುಂಬಾ ಚೆನ್ನಾಗಿದೆ, ಎಷ್ಟಾಯ್ತು?
ಕೋಲ್ಯ: ಖರೀದಿ ಮಾಡಿದ್ದಲ್ಲ, ರೇಸ್ ಅಲ್ಲಿ ಗೆದ್ದಿದ್ದು...
ಹುಡುಗಿ: ವಂಡರ್ಫುಲ್...ಎಷ್ಟು ಜನ ಇದ್ರು ರೇಸಲ್ಲಿ?
ಕೋಲ್ಯ: ನನ್ನನ್ನೂ ಸೇರಿಸಿ 4 ಜನ. ಮೂವರು ಪೋಲೀಸರು, ಒಬ್ಬ ಮೊಬೈಲ್ ಅಂಗಡಿಯವ!