ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ್ ಒಂದೊಮ್ಮೆ ಈ ರಾಜ್ಯದ ಸಿಎಂ ಆದ್ರೆ?
ಎಲ್ಲರಿಗೂ ಕೂಲಿಂಗ್ ಗ್ಲಾಸ್ ಉಚಿತ!
ತಲವಾಟ್ ಮಂಜುನಾಥ, 9480931611
ಪ್ರೇಮಿಗಳನ್ನು ಜೈಲಿನ ಒಂದೇ ಸೆಲ್ನಲ್ಲಿ ಇರಿಸಿದರೆ ಏನಾಗುತ್ತೆ?
ಸ್ವಲ್ಪ ದಿನಕ್ಕೇ ಆಕೆಗೆ ಹೆರಿಗೆ ರಜೆ ನೀಡಬೇಕಾಗುತ್ತೆ!
ಬರ್ಕಲಿರಮೇಶ ಕಿರಗಂದೂರು, 908741348
ಸಂಜೆ ಸೊಬಗಿನಲಿ ಹಾರುವ ಹಕ್ಕಿಯ ಸಾಲನ್ನು ತೋರಿಸುತ್ತೇನೆ ಬರುತ್ತೀರಾ?
ಅಕ್ಕಿ ಆರುತಿದೆ ನೋಡಿದಿರಾ ಎಂಬ ಹಿನ್ನೆಲೆ ಗಾಯನ ಯಾರದ್ದು?
ಕೌಶಿಕ್ರಾಜ್, ಹನುಮನಾಳು
ಇಲ್ಲಿರುವುದು ಸುಮ್ಮನೆ ಅಲ್ಲಿರುವುದು ನಮ್ಮನೆ ಅಂತಾರಲ್ಲಾ?
ಶೈಕ್ಷಣಿಕ ಇಲಾಖೆಯಲ್ಲಿರುವರು ಕಿಮ್ಮನೆ ಸುಮ್ಮನೆ ಅಂತ ಕಾಂಗ್ರೆಸ್ಸಿಗರು ಹೊಸ ಸ್ಲೋಗನ್ ಹೇಳುತ್ತಿದ್ದಾರೆ!
ಸರಸ್ವತಿ ರಮೇಶ್, ಹನುಮನಾಳು
ಪ್ರಿಯತಮ ಬೈಕ್ ಚಲಾಯಿಸುವಾಗ ಅವನನ್ನು ಗಟ್ಟಿಯಾಗಿ ಅಪ್ಪಿಕೊಂಡರೆ ಆ ವಾಹನ ನಡೆಸುವುದು ಹೇಗೆ?
ಗಟ್ಟಿಯಾಗಿ ಹಿಡ್ಕೊಂಡಷ್ಟೂ ವಾಹನ ಜೋರಾಗಿ ಓಡುತ್ತೆ!
ಬಾಣಭಟ್ಟ