ಟೀಚರ್: ವಿದ್ಯುತ್ ಅಂದರೆ ಏನು?
ಮರಿಕೋಲ್ಯ: ಯಾವ ಸಮಯದಲ್ಲಾದರೂ ಓಡಿ ಹೋಗುವ, ಯಾವ ಸಮಯದಲ್ಲಾದರೂ ಬರುವ, ಒಮ್ಮೊಮ್ಮೆ ಮಧ್ಯರಾತ್ರಿಯಲ್ಲೂ ಕಾಣೆಯಾಗುವ ಸರ್ಕಾರದ ಪುಂಡ 'ಮಗನೇ' ವಿದ್ಯುತ್!
--
"ಎಲ್ಲರೂ ಅಲೆಯ ಜೊತೆಗೇ ಸಾಗುತ್ತಾರೆ, ಆದರೆ ಅಲೆಗೆ ವಿರುದ್ಧವಾಗಿ ಯಾರು ಹೋಗುತ್ತಾರೋ ಅವರು ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾರೆ..."
ಕೋಲ್ಯ ಈ ಮಾತನ್ನು ಹೇಳುವ ಮುಂಚೆಯೇ ಟ್ರಾಫಿಕ್ ಪೊಲೀಸ್ ರಸೀದಿ ಹರಿದು ಕೊಟ್ಟ!
--
ಭಿಕ್ಷುಕ: ಅಣ್ಣಾಖಖಖಖ ನಿನ್ನೆಯಿಂದ ಊಟ ಮಾಡಿಲ್ಲ...ಧರ್ಮ ನೀಡಣ್ಣ
ಕೋಲ್ಯ: ಚಿಲ್ರೆ ಇಲ್ವಲ್ಲಪ್ಪಾ. ನನ್ಹತ್ರ 100 ರುಪಾಯಿ ನೋಟಿದೆ. ನಿನ್ಹತ್ರ 50 ರುಪಾಯಿ ಇದೆಯಾ?
ಭಿಕ್ಷುಕ: ಇದೇ ಅಣ್ಣಾ..
ಕೋಲ್ಯ: ಹಾಗಿದ್ರೆ ಮೊದಲು ಆ ಹಣದಲ್ಲಿ ಊಟ ಮಾಡ್ಕೊಂಡು ಬಾ...!