ತಲವಾಟ ಮಂಜುನಾಥ, 9480931611
ಲವ್ ಹುಟ್ಟಲು ಔಷಧಿ ಇದೆಯೇ?
ಮಕ್ಕಳು ಹುಟ್ಟಲು ಇದೆ. ಲವ್ ಹುಟ್ಟಲೂ ಔಷಧಿ ಬೇಕು ಅಂದ್ರೆ ಕಂಡೆನ್ಸರ್ ವೀಕ್ ಆಗಿದೆ ಎಂದರ್ಥ!
ನೇರಲಗುಡ್ಡ ಶಿವಕುಮಾರ್, 9480343742
ಶುಗರ್‌ಗೂ ಫಿಗರ್‌ಗೂ ಇರುವ ಸಾಮ್ಯತೆ ಏನು?
ಫಿಗರ್ ಸ್ವೀಟ್ ಆಗಿದೆ ಗುರು ಅಂತಾರೆ. ಸ್ವೀಟ್ ಜಾಸ್ತಿ ಆದ್ರೆ ಫಿಗರ್ ಹಾಳಾಗುತ್ತೆ ಅನ್ನೋದು ಅವಳ ಗೋಳು!
ವಿ. ಹೇಮಂತಕುಮಾರ, 9035992900
ಸಚಿವರು ಶುದ್ಧ ಹಸ್ತರಾಗಿರಲಿ ಅಂದರಂತೆ ನಾಣಯ್ಯ. ಸೋಪಿನಿಂದಲೋ, ಡಿಟರ್ಜೆಂಟಿನಿಂದಲೋ?
ನಾಣಯ್ಯ ಅವರ ಹೇಳಿಕೆ ಹಿಂದೆ ಡೆಟಾಲ್ ಕಂಪನಿ ಕೈವಾಡ ಇದೆ ಎಂದು ಕಾಂಗ್ರೆಸ್ಸಿಗರು ಚೀರುತ್ತಿದ್ದಾರೆ!
ಆರ್.ಸಿ. ಪರಶುರಾಮ, 9902203492
ಟ್ವಿಟರ್ ಅಕೌಂಟ್ ಹೊಂದಿಯೂ ಟ್ವೀಟಿಸದವರ ಬಗ್ಗೆ ಏನೆಂದು ಟ್ವೀಟಿಸಬಹುದು?
ಮನಮೋಹನ್ ಸಿಂಗ್ ಅಭಿಮಾನಿಗಳು ಎಂದು!
ನಂದ ಯಡಿಯೂರು, 9880055196
ಹೆಂಡ್ತಿಗೂ ಮೊಬೈಲ್‌ಗೂ ಏನು ವ್ಯತ್ಯಾಸ?
ಮೊಬೈಲ್‌ನಲ್ಲಿ ಸೈಲೆಂಟ್ ಮೋಡ್ ಮತ್ತು ಸ್ವಿಚ್‌ಆಫ್ ಆಯ್ಕೆಯಿದೆ!
ಬಾಣಭಟ್ಟ