ಹೇರ್ ಕಟಿಂಗ್ ಸಲೂನ್ನಲ್ಲಿ ಹುಡುಗಿ...
ಹುಡುಗಿ: ಸ್ಟೆಪ್ಸ್ ಇರ್ಲಿ, ಭುಜದ ವರೆಗೂ ಕಟ್ ಮಾಡಿ, ಜಾಸ್ತಿ ಶಾರ್ಟ್ ಮಾಡ್ಬೇಡಿ, ರೈಟ್ ಸೈಡಲ್ಲಿ ಕರ್ಲಿ(ಗುಂಗುರು) ಹೇರ್ಸ್ ಮಾಡೋದನ್ನು ಮರೀಬೇಡಿ....
ಕಟಿಂಗ್ ಶಾಪಲ್ಲಿ ಹುಡುಗ...
ಹುಡುಗ: ಅಣ್ಣಾ ನಿನಗೆ ಹೆಂಗೆ ಸರಿ ಅನ್ನಸ್ತದೋ ಹಂಗ್ ಕತ್ತರಿಸಿಬಿಡು!
--
ಒಬಾಮಾ: ಮೋದೀಜಿ, ನನಗೆ ಭಾರತದ ವೀಸಾ ಬೇಕಾಗಿತ್ತು.
ಮೋದಿ: ಯಾಕೆ?
ಒಬಾಮಾ: ನಿಮಗೆ ವೀಸಾ ಕೊಡೋಕ್ಕೆ!
--
ಕೋಲ್ಯ ಬಸ್ಕಿ ಹೊಡೆಯುತ್ತಿದ್ದ: 1, 2, 3, 4...
ಅಚಾನಕ್ಕಾಗಿ ಹುಡುಗಿಯೊಬ್ಬಳು ಅವನ ಸನಿಹ ಬಂದಳು
ಕೋಲ್ಯ: 97, 98, 99...