ಮರಿಕೋಲ್ಯ: ಅಪ್ಪ ನಿನಗೊಂದು ಸಿಹಿ ಸುದ್ದಿ ಇದೆ..
ಕೋಲ್ಯ: ಏನೋ ಅದು?
ಮರಿಕೋಲ್ಯ: ನಾನು ಎಕ್ಸಾಮಲ್ಲಿ ಪಾಸಾದ್ರೆ 5,000 ರುಪಾಯಿ ಮೊಬೈಲ್ ಕೊಡಿಸ್ತೀನಿ ಅಂದಿದ್ಯಲ್ಲ?
ಕೋಲ್ಯ(ಖುಷಿಯಿಂದ): ಹಾಂ, ಹೌದು
ಮರಿಕೋಲ್ಯ: ನಿನ್ನ 5,000 ರುಪಾಯಿ ಉಳೀತು!
---
ಮೋದಿ: ಟೈಮ್ ಎಷ್ಟಾಯ್ತು?
ಅಮಿತ್ ಶಾ: ಆಪ್ ಗಂಟೆ, ಕಾಂಗ್ರೆಸ್ ನಿಮಿಷ...
ಮೋದಿ: ಅಂದ್ರೆ!?
ಅಮಿತ್ ಶಾ: '4' ಗಂಟೆ, '44' ನಿಮಿಷ!
---
ಹೀಗೊಂದು ಘೋಷಣೆ: ಪೋಷಕರೇ ಏಳಿ, ಎದ್ದೇಳಿ. ನಿಮ್ಮ ಮಗನನ್ನು ಚಹಾದ ಅಂಗಡಿಗೆ ಕಳುಹಿಸಿ ಮೋದಿ ಮಾಡುತ್ತೀರೋ ಅಥವಾ ಐಐಟಿಗೆ ಕಳುಹಿಸಿ ಕೇಜ್ರೀವಾಲ್ನನ್ನೋ?!