ಕೋಲ್ಯನ ತಾಯಿ ತನ್ನ ಸೊಸೆಗೆ ಪ್ರೀತಿಯಿಂದ ಹೇಳಿದಳು: ನೋಡಮ್ಮಾ, ನೀನು ನನ್ನ ಮಗಳಿದ್ದ ಹಾಗೆ. ಇವತ್ತಿಂದ ನೀನು ನನ್ನ ಅಮ್ಮ ಅನ್ನು. ನಿನ್ನ ಮಾವನ್ನ ಅಪ್ಪ ಅಂತ ಕರಿ.
(ಅಷ್ಟರಲ್ಲಿ ಬಾಗಿಲು ಬಡಿದ ಸದ್ದಾಯಿತು. ಸೊಸೆ ಬಾಗಿಲು ತೆರೆದಾಗ ಅಲ್ಲಿ ಆಕೆಯ ಪತಿ ಕೋಲ್ಯ ನಿಂತಿದ್ದ)
ಅತ್ತೆ: ಯಾರದು?
ಸೊಸೆ: ಅಮ್ಮ, ಆಫೀಸಿಂದ ಅಣ್ಣಾ ಬಂದಿದಾನೆ!