ಕೋಲ್ಯನಿಗೆ ಸಿಂಗಾಪುರದಲ್ಲಿ ಕೆಲಸ ಸಿಕ್ಕಿತು. ಅಲ್ಲಿಗೆ ತಲುಪಿದವನೇ ತನ್ನ ಹೆಂಡತಿಗೆ ಇ-ಮೇಲ್ ಕಳುಹಿಸಿದ. ಆದರೆ ಆ ಸಂದೇಶ ಇನ್ನೊಬ್ಬ ಮಹಿಳೆಗೆ ತಲುಪಿತು. ಆ ಮಹಿಳೆ ಆಗ ತಾನೆ ತನ್ನ ಗಂಡನ ಶವಸಂಸ್ಕಾರ ಮುಗಿಸಿಕೊಂಡು ಮನೆಗೆ ಬಂದಿದ್ದಳು. ಇ-ಮೇಲ್ ಓದುತ್ತಿದ್ದಂತೆಯೇ ಆಕೆ ಮೂರ್ಛೆ ಹೋದಳು!
ಆ ಇ-ಮೇಲ್ ಹೀಗಿತ್ತು: "ಜಾನು ಈ ಜಾಗ ತುಂಬಾ ಚೆನ್ನಾಗಿದೆ. ಸ್ವರ್ಗ ಅಂದರೆ ಹೇಗಿರುತ್ತೆ ಅಂತ ಈಗ ಗೊತ್ತಾಯ್ತು. ಚಿಂತೆ ಮಾಡಬೇಡ, ಇನ್ನೆರಡು ತಿಂಗಳಲ್ಲಿ ನಿನ್ನನ್ನೂ ಇಲ್ಲಿ ಕರೆತರುತ್ತೇನೆ!"
ನನನ
ಡಾಕ್ಟರ್: ಶ್ರೀಮತಿ ರಾಣಿಯವರೇ ನಿಮಗೊಂದು ಸಿಹಿ ಸುದ್ದಿ ಇದೆ...
ರಾಣಿ: ಶ್ರೀಮತಿನಾ? ಡಾಕ್ಟರ್ ನನಗಿನ್ನೂ ಮದುವೆ ಆಗಿಲ್ಲ
ಡಾಕ್ಟರ್: ಓಹ್ ಹೌದಾ?! ಕುಮಾರಿ ರಾಣಿಯವರೇ ನಿಮಗೊಂದು ಕೆಟ್ಟ ಸುದ್ದಿ ಇದೆ!