ಶನಿ ಹೆಗಲನ್ನೇ ಏರುವುದು ಏಕೆ?

Updated on: 

ಆರ್.ಸಿ. ಪರಶುರಾಮ, ಶಿಕಾರಿಪುರ, 9902203492
ಕೇಜ್ರಿವಾಲರು 2 ದಿನ ಜೈಲಿಗೆ ಹೋಗಿದ್ದರ ದೂರಾಲೋಚನೆ ಏನಿರಬಹುದು?
ಜೈಲಿನಲ್ಲಿದ್ದವರ ಕಷ್ಟ ನಿವಾರಣೆಗೆ ಧರಣಿ ಆರಂಭಿಸದಿದ್ದರೆ ಸಾಕು.

ಚಿರಪ್ರಭ, ನಂಜನಗೂಡು
ಬಸ್, ವಿದ್ಯುತ್, ನೀರಿನ ದರಗಳನ್ನು ಏರಿಸಿಯಾಯ್ತು. ಮುಂದಿನ ಸರದಿ?
ಉಳಿದವುಗಳ ದರವನ್ನು ಕೇಂದ್ರ ಸರ್ಕಾರ ಮೊದಲೇ ಏರಿಸಿಯಾಗಿತ್ತು!

ವಿ. ಹೇಮಂತಕುಮಾರ, 9901738104
ಅವಳ ಆಸೆ ತುಂಬಿದ ಕಣ್ಣುಗಳ ನೋಟ ಸ್ನೇಹಾನಾ, ಪ್ರಿತೀನಾ?
ಅವಳ ಕಣ್ಣುಗಳಲ್ಲಿ ಆಸೆ ಹುಡುಕಿದ ನಿನ್ನ ಮನಸಲ್ಲಿ ಅವೆರಡೂ ಇಲ್ಲ ಎಂಬುದು ಖಾತ್ರಿ!

ಚಿರಪ್ರಭ, ನಂಜನಗೂಡು
ಜಾತ್ಯತೀತ ಎಂದು ಬೊಬ್ಬೆಯಿಡುವ ಪ್ರಗತಿಪರರು ಮುಸ್ಲಿಮರಲ್ಲೇಕೆ ಜಾತ್ಯತೀತ ಸಿದ್ಧಾಂತ ಬಿತ್ತಲು ಪ್ರಯತ್ನಿಸುವುದಿಲ್ಲ?
ಅವರ ಸುದ್ದಿಗೆ ಹೋದರೆ ಇವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸತ್ಯದ ಅರಿವಿರುವುದರಿಂದ.

ತಲವಾಟ ಮಂಜುನಾಥ, ಸಾಗರ, 9480931611
ಶನಿ ಹೆಗಲನ್ನೇ ಏರುವುದು ಏಕೆ?
ಕಿವಿಗೆ ಬೆರಳಿಟ್ಟು ಕಚಗುಳಿಯಿಡಲು!

 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com