ಚುನಾವಣಾ ಅಭ್ಯರ್ಥಿಗಳ ಹೆಚ್ಚಳದಿಂದ ಇವಿಎಂಗಳ ಕೊರತೆ: ಹೊರ ರಾಜ್ಯದಿಂದ ಆಮದಿಗೆ ಕ್ರಮ

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ (ಬಿಬಿಎಂಪಿ) ಮೂರು ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಅಭ್ಯರ್ಥಿಗಳು ನಿರೀಕ್ಷೆಗೂ ಮೀರಿ ಕಣಕ್ಕಿಳಿದಿರುವುದರಿಂದ ಮತಯಂತ್ರಗಳ ಕೊರತೆ ಉಂಟಾಗಿದ್ದು, ಹೊರ ಜಿಲ್ಲೆ
ಚುನಾವಣಾ ಅಭ್ಯರ್ಥಿಗಳ ಹೆಚ್ಚಳದಿಂದ ಇವಿಎಂಗಳ ಕೊರತೆ: ಹೊರ ರಾಜ್ಯದಿಂದ ಆಮದಿಗೆ ಕ್ರಮ
ಚುನಾವಣಾ ಅಭ್ಯರ್ಥಿಗಳ ಹೆಚ್ಚಳದಿಂದ ಇವಿಎಂಗಳ ಕೊರತೆ: ಹೊರ ರಾಜ್ಯದಿಂದ ಆಮದಿಗೆ ಕ್ರಮ
ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ (ಬಿಬಿಎಂಪಿ) ಮೂರು ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಅಭ್ಯರ್ಥಿಗಳು ನಿರೀಕ್ಷೆಗೂ ಮೀರಿ ಕಣಕ್ಕಿಳಿದಿರುವುದರಿಂದ ಮತಯಂತ್ರಗಳ ಕೊರತೆ ಉಂಟಾಗಿದ್ದು, ಹೊರ ಜಿಲ್ಲೆ ಹಾಗೂ ರಾಜ್ಯಗಳ ಯಂತ್ರಗಳ ಮೊರೆ ಹೋಗುವ ಅನಿವಾರ್ಯತೆ ಎದುರಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಸಾಮಾನ್ಯವಾಗಿ ಒಂದು ವಿದ್ಯುನ್ಮಾನ ಮತಯಂತ್ರದಲ್ಲಿ (ಇವಿಎಂ) 15  ಅಭ್ಯರ್ಥಿಗಳ ಹೆಸರಿರುತ್ತದೆ. ಆದರೆ, ಈ ಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ 15ಕ್ಕಿಂತ ಹೆಚ್ಚಿನ ಅಭ್ಯರ್ಥಿಗಳಿರುವುದರಿಂದ 2 ಇವಿಎಂಗಳನ್ನು ಬಳಸಲಾಗುತ್ತಿದೆ.  ಇದರಿಂದ ಮತಯಂತ್ರಗಳ ಕೊರತೆ ಎದುರಾಗಿದ್ದು, ಹಾಸನ, ಕೊಪ್ಪಳ ಸೇರಿ ಇತರ  ಜಿಲ್ಲೆಗಳಲ್ಲಿ ಹೆಚ್ಚುವರಿ ಬ್ಯಾಲೆಟ್‍ಗಳನ್ನು ತರಿಸಲಾಗುತ್ತಿದೆ ಎಂದರು. 
ಬೆಂಗಳೂರು ಕೇಂದ್ರ  ಕ್ಷೇತ್ರದಲ್ಲಿ 1 ಸಾವಿರ ಹೆಚ್ಚುವರಿ ಮತಯಂತ್ರಗಳ ಅಗತ್ಯವಿದೆ. ಆದ್ದರಿಂದ ಹೊರ  ರಾಜ್ಯಗಳಿಂದಲೂ ಯಂತ್ರಗಳನ್ನು ತರಿಸಲು ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಜೊತೆಗೆ ಚುನಾವಣಾ ಕಾರ್ಯಗಳಿಗೆ 982 ಕೆಎಸ್ಆರ್ ಟಿಸಿ ಬಸ್ ಗಳು, 115 ಜೀಪ್‍, ವ್ಯಾನ್‍ಗಳು ಸೇರಿ 1,437 ವಾಹನಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ  ಎಂದರು. 
ಬೆಂಗಳೂರು ಉತ್ತರ ಕ್ಷೇತ್ರದಿಂದ 31, ಬೆಂಗಳೂರು ಕೇಂದ್ರದಿಂದ 22 ಹಾಗೂ ಬೆಂಗಳೂರು ದಕ್ಷಿಣದಿಂದ 25 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com