'ಕರೋ ಮತದಾನ್' ಜಾಗೃತಿ ವಿಡಿಯೋ: ಶಾರೂಕ್ ಖಾನ್‌ ಗೆ ಪ್ರಧಾನಿ ಮೋದಿ ಮೆಚ್ಚುಗೆ

ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರೂಕ್‌ ಖಾನ್ ಅವರ ಮತದಾನ ಜಾಗೃತಿ ಮೂಡಿಸುವ ಗೀತೆಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದ್ದಾರೆ.
ಶಾರೂಕ್ ಖಾನ್-ಮೋದಿ
ಶಾರೂಕ್ ಖಾನ್-ಮೋದಿ
Updated on: 
ನವದೆಹಲಿ: ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರೂಕ್‌ ಖಾನ್ ಅವರ ಮತದಾನ ಜಾಗೃತಿ ಮೂಡಿಸುವ ಗೀತೆಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದ್ದಾರೆ.
ಹಾಸ್ಯಮಯ ವೀಡಿಯೋ ಗೀತೆಯನ್ನು ಬಿಡುಗಡೆಗೊಳಿಸುವ ಮೂಲಕ ಎಸ್‌ಆರ್‌ಕೆ ದೇಶದ ಜನತೆಗೆ ಮತದಾನ ಮಾಡುವಂತೆ ಕರೆ ನೀಡಿದ್ದರು. ‘ಕರೊ ಮತದಾನ್‌' ಎಂಬ ಹೆಸರಿನ ಈ ಗೀತೆಯಲ್ಲಿ ಶಾರೂಕ್ ದೇಶದಲ್ಲಿ ಜನ, ಸರ್ಕಾರವನ್ನು ಆಯ್ಕೆ ಮಾಡಬೇಕಾದ ಮಹತ್ವವನ್ನು ತಿಳಿಸಿದ್ದರು. 
ಟ್ವಿಟ್ಟರ್‌ನಲ್ಲಿ ಶಾರೂಕ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಅತ್ಯದ್ಭುತ ಪ್ರಯತ್ನ, ಭಾರತದ ಜನ, ಅದರಲ್ಲಿಯೂ ಮೊದಲ ಸಲ ಮತದಾನ ಮಾಡುತ್ತಿರುವವರು ನಿಮ್ಮ ಕಾಳಜಿಯನ್ನು ಕೇಳುತ್ತಾರೆ ಮತ್ತು ಬೃಹತ್‌ ಸಂಖ್ಯೆಯಲ್ಲಿ ಮತದಾನಕ್ಕೆ ಬರುತ್ತಾರೆಂಬ ಭರವಸೆಯಿದೆ’ ಎಂದಿದ್ದಾರೆ. 
ತನಿಷ್ಕ್‌ ಬಗಾಚಿ ಸಂಯೋಜನೆ, ಅಬ್ಬಿ ವಿರಲ್ ರಚನೆಯಿರುವ ಗೀತೆಯನ್ನು ಸ್ವತಃ ಶಾರೂಕ್‌ ಹಾಡಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ಶಾರೂಖ್ ಖಾನ್ ಮತ್ತು ಕರಣ್ ಜೋಹಾರ್ ರನ್ನು ಮತದಾನ ಕುರಿತು ಜಾಗೃತಿ ಮೂಡಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂಧಿಸಿರುವ ಶಾರೂಕ್ ಖಾನ್ ವಿಡಿಯೋ ಮೂಲಕ ಮತದಾನದ ಜಾಗೃತಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com