ಪ್ರಿಯಾಂಕಾ ಗಾಂಧಿ-ರಾಹುಲ್ ಗಾಂಧಿ
ಸ್ವಾರಸ್ಯ
ಒಳ್ಳೆಯ ಸೋದರ ಎಂದರೆ ಅರ್ಥವೇನೆಂದು ರಾಹುಲ್ ಗಾಂಧಿ ವಿವರಿಸಿದ್ದು ಹೀಗೆ
ಅಣ್ಣ-ತಂಗಿಯರ ಅನುಬಂಧ, ಸಂಬಂಧಗಳ ಬಗ್ಗೆ ಎಷ್ಟು ವರ್ಣಿಸಿದರೂ ಕಡಿಮೆಯೇ. ಸೋದರ-ಸೋದರಿಯ ....
ಕಾನ್ಪುರ: ಅಣ್ಣ-ತಂಗಿಯರ ಅನುಬಂಧ, ಸಂಬಂಧಗಳ ಬಗ್ಗೆ ಎಷ್ಟು ವರ್ಣಿಸಿದರೂ ಕಡಿಮೆಯೇ. ಸೋದರ-ಸೋದರಿಯ ನಡುವಿನ ಸಂಬಂಧ ಭಾರತೀಯ ಸಂಸ್ಕೃತಿಯಲ್ಲಿ ಅತಿ ವಿಶಿಷ್ಟವಾದದ್ದು. ಹಾಗಾದರೆ ಅಣ್ಣ-ತಂಗಿ ಸಂಬಂಧ ಎಂದರೇನು ಎಂಬುದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿರೂಪಣೆ ನೀಡಿದ್ದಾರೆ.
ಲೋಕಸಭೆ ಚುನಾವಣೆಯ ಪ್ರಚಾರದ ಮಧ್ಯೆ ಉತ್ತರ ಪ್ರದೇಶದ ಕಾನ್ಪುರ್ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ನಿನ್ನೆ ಭೇಟಿಯಾದರು. ಈ ವೇಳೆ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ಸಂಭ್ರಮಿಸಿದರು. ನಂತರ ರಾಹುಲ್ ಗಾಂಧಿ ಒಳ್ಳೆಯ ಸೋದರ ಎಂದರೇನು ಎಂದು ನಾನು ಹೇಳುತ್ತೇನೆ ಎಂದು ಹೇಳಿದ್ದಾರೆ.
ನಾನು ಸುಧೀರ್ಘ ಪ್ರಯಾಣ ಮಾಡುತ್ತಿದ್ದೇನೆ. ಆದರೆ ನನ್ನದು ಚಿಕ್ಕ ಹೆಲಿಕಾಪ್ಟರ್. ನನ್ನ ತಂಗಿ ಸಮೀಪದ ಕ್ಷೇತ್ರಗಳ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಆದರೂ ಅವಳಿಗೆ ದೊಡ್ಡ ಹೆಲಿಕಾಪ್ಟರ್, ಆದರೆ ನಾನು ನನ್ನ ತಂಗಿಯನ್ನು ಬಹಳ ಪ್ರೀತಿಸುತ್ತೇನೆ ಎಂದು ರಾಹುಲ್ ಗಾಂಧಿ ಪ್ರಿಯಾಂಕ್ ಗಾಂಧಿ ಅವರನ್ನು ರೇಗಿಸಿದರು. ಈ ವೇಳೆ ಅಲ್ಲಿ ನಿಂತಿದ್ದ ಪೈಲಟ್ ಹಾಗೂ ಸಿಬ್ಬಂದಿ ನಕ್ಕು ಈ ರಾಜಕೀಯ ನೇತಾರರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ನಂತರ ಅಣ್ಣ-ತಂಗಿ ತಮ್ಮ ತಮ್ಮ ಪ್ರಚಾರದ ಕ್ಷೇತ್ರಕ್ಕೆ ತೆರಳಿದರು.
ಈ ವೀಡಿಯೋವನ್ನು ರಾಹುಲ್ ಗಾಂಧಿ ಅವರು, ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದರೊಂದಿಗೆ ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಹ ಕೆಲವು ಮನ ಸೆಳೆಯುವ ಫೋಟೋಗಳನ್ನು ಹಂಚಿಕೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ