ಲೋಕಸಭೆ ಚುನಾವಣೆ: ಹಿಮಾಚಲ ಪ್ರದೇಶದ ತಶಿಗಂಗ್ ಜಗತ್ತಿನ ಅತಿ ಎತ್ತರದ ಮತಗಟ್ಟೆ

2019ರ ಲೋಕಸಭೆ ಚುನಾವಣೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದ್ದು, ಜಗತ್ತಿನ ಅತಿ ಎತ್ತರದ ಮತಗಟ್ಟೆ ಹಿಮಾಚಲ ಪ್ರದೇಶದ ಬೌದ್ಧ ಪ್ರಾಬಲ್ಯದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಚಂಡೀಗಢ: 2019ರ ಲೋಕಸಭೆ ಚುನಾವಣೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದ್ದು, ಜಗತ್ತಿನ ಅತಿ ಎತ್ತರದ ಮತಗಟ್ಟೆ ಹಿಮಾಚಲ ಪ್ರದೇಶದ ಬೌದ್ಧ ಪ್ರಾಬಲ್ಯದ ಲಾಹೌಲ್ ಸ್ಪಿತಿ ಜಿಲ್ಲೆಯ ತಶಿಗಂಗ್ ನಲ್ಲಿದೆ.
ಈ ಮತಗಟ್ಟೆ ಒಟ್ಟು 15,256 ಅಡಿ ಎತ್ತರದಲ್ಗಿದ್ದು, ದೇಶದ ಎರಡನೇ ಅತಿ ದೊಡ್ಡ ಕ್ಷೇತ್ರವಾದ ಮಂಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17 ಲೋಕಸಭಾ ಕ್ಷೇತ್ರಗಳಿವೆ.
ಭಾರತ-ಚೀನಾ ಗಡಿಯಿಂದ 29 ಕಿ.ಮೀ.ದೂರದಲ್ಲಿರುವ ತಶಿಗಂಗ್ ಮತ್ತು ಗೆಟೆ ಎರಡು ಗ್ರಾಮಗಳನ್ನು ಸೇರಿ ಒಂದು ಮತಗಟ್ಟೆ ಸ್ಥಾಪಿಸಲಾಗಿದೆ.
ಪರಿಷ್ಕೃತ ಚುನಾವಣಾ ಪಟ್ಟಿಯ ಪ್ರಕಾರ, ಈ ಎರಡು ಗ್ರಾಮಗಳಲ್ಲಿ 48 ಮತದಾರರಿದ್ದು, 30 ಪುರುಷರು ಹಾಗೂ 18 ಮಹಿಳಾ ಮತದಾರರಿದ್ದಾರೆ. 78 ವರ್ಷದ ರಿಗ್ಜಿನಿ ತಶಿಗಂಗ್ ಮತಗಟ್ಟೆಯ ಅತ್ಯಂತ ಹಿರಿಯ ಮತದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com