ಮೇನಕಾ ಗಾಂಧಿ ಪ್ರಾಣಿ ಪ್ರೀತಿ: ಮತಬೇಟೆಯ ನಡುವೆಯೂ ಕ್ಯಾನ್ಸರ್ ಪೀಡಿತ ಕತ್ತೆ ಚಿಕಿತ್ಸೆಗೆ ನೆರವಾದ ಸಚಿವೆ

ಕೇಂದ್ರ ಸಚಿವೆ ಮೇನಕಾ ಗಾಂಧಿ ಪ್ರಾಣಿಗಳ ಮೇಲಿನ ಪ್ರೀತಿಯಿಂದಾಗಿ ಪ್ರಸಿದ್ದರಾಗಿದ್ದಾರೆ. ಇದೇ ಪ್ರಾಣಿ ಪ್ರೀತಿಯು ಅವರನ್ನು ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿಸಿದೆ.
ಮೇನಕಾ ಗಾಂಧಿ
ಮೇನಕಾ ಗಾಂಧಿ
ಸುಲ್ತಾನ್ ಪುರ್: ಕೇಂದ್ರ ಸಚಿವೆ ಮೇನಕಾ ಗಾಂಧಿ ಪ್ರಾಣಿಗಳ ಮೇಲಿನ ಪ್ರೀತಿಯಿಂದಾಗಿ ಪ್ರಸಿದ್ದರಾಗಿದ್ದಾರೆ. ಇದೇ ಪ್ರಾಣಿ ಪ್ರೀತಿಯು ಅವರನ್ನು ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿಸಿದೆ. 
ವರದಿಯೊಂದರ ಪ್ರಕಾರ ಮೇನಕಾ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಕಾಲಿನ ಗಾಯವಾಗಿ ರಕ್ತ ಸ್ರಾವವಾಗುತ್ತಿದ್ದ ಕತ್ತೆಯೊಂದನ್ನು ಕಂಡಿದ್ದಾರೆ. ಆ ಸಭೆ ಮುಗಿದ ಮರುಕ್ಷಣವೇ ಮೇನಕಾ ಕತ್ತೆಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮೇನಕಾ ಗಂಢಿ ಬಿಜೆಪಿ ಅಭ್ಯರ್ಥಿಯಾಗಿದ್ದು ಲೋಕಸಭೆ ಕಣದಲ್ಲಿದ್ದಾರೆ.
ಮೇನಕಾ ಗಾಂಧಿ ಸೂಚನೆಯ ಬಳಿಕ ಅಧಿಕಾರಿಗಳು ಕತ್ತೆನನ್ನು ಬರೇಲಿಯಲ್ಲಿರುವ ಭಾರತೀಯ ಪಶುವೈದ್ಯ ಸಂಶೋಧನಾ ಸಂಸ್ಥೆ (ಐವಿಆರ್ಐ) ಗೆ  ದಾಖಲಿಸಿದ್ದಾರೆ.
ಕತ್ತೆ ಕ್ಯಾನ್ಸರ್ ಪೀಡಿತವಾಗಿದೆ, ಪ್ರಾಣಿಯು ಚಿಕಿತ್ಸೆಗೆ ತಕ್ಷಣ ಸ್ಪಂದನ ಮಾಡದಿದ್ದಲ್ಲಿ ಇದರ ಕಾಲು ಕತ್ತರಿಸಬೇಕಾಗುವುದು ಎಂದು ಸಿಬ್ಬಂದಿಗಳು ಹೇಳಿದ್ದಾರೆ.
ಪ್ರಾಣಿ ಹೆಚ್ಚು ನೋವನ್ನು ಅನುಭವಿಸುವುದಿಲ್ಲ ಎಂದು ಖಾತ್ರಿಪಡಿಸಿಕೊಳ್ಳಲು ಮೇನಕಾ ಗಾಂಧಿ ವೈದ್ಯರನ್ನು ಕೇಳಿದ್ದಾರೆ. ಎಂದು  ಪೀಪಲ್ ಫಾರ್ ಅನಿಮಲ್ಸ್ ಪ್ರಾದೇಶಿಕ ಅಧ್ಯಕ್ಷ ಸತೀಶ್ ಯಾದವ್ ಹೇಳಿದರು
ಕತ್ತೆಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕೆ ಅಥವಾ ಕೆಮೋಥೆರಪಿಯನ್ನು ನೇಡಬೇಕೆ ಎಂದು ಐವಿಆರ್ಐ ವೈದ್ಯಾಧಿಕಾರಿಗಳು ತೀರ್ಮಾನಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com