ಗಾಂಧಿನಗರ(ಗುಜರಾತ್):ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೂಡ ಬಿಜೆಪಿ ನೇತೃತ್ವದ ಎನ್ ಡಿಎ ಗೆಲುವಿನತ್ತ ಹೆಜ್ಜೆ ಹಾಕುತ್ತಿರುವ ಸಂದರ್ಭದಲ್ಲಿ ಇತ್ತ ನರೇಂದ್ರ ಮೋದಿಯವರ ತಾಯಿ 98 ವರ್ಷದ ಹೀರಾಬೆನ್ ಗುಜರಾತ್ ನ ಗಾಂಧಿನಗರ ಸಮೀಪ ರೈಸಿನ್ ಗ್ರಾಮದ ತಮ್ಮ ಮನೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ತಮ್ಮದೇ ಆದ ರೀತಿಯಲ್ಲಿ ಸಂಭ್ರಮಾಚರಿಸುತ್ತಿದ್ದಾರೆ.