'ಹೂವಿನ ಜಾಗಕ್ಕೆ ಬಂತು ಸೇಬು, ಮೂಸಂಬಿ: ನೆಚ್ಚಿನ ನೇತಾರರಿಗೆ ಹಾರವಾಯ್ತು ಒಣದ್ರಾಕ್ಷಿ, ಗೋಡಂಬಿ!'

ಹಿಂದೆಲ್ಲಾ ಚುನಾವಣೆಗಳಲ್ಲಿ ರಾಜಕೀಯ. ನಾಯಕರುಗಳಿಗೆ ಹೂವಿನ ಹಾರ ಹಾಕುತ್ತಿದ್ದರು, ಆದರೆ ಈಗ ಟ್ರೆಂಡ್ ಬದಲಾಗಿದೆ, ಹೂವಿನ ಜಾಗಕ್ಕೆ ಹಣ್ಣುಗಳು ಬಂದು ,...
ಸೇಬಿನ ಹಾರ(ಸಂಗ್ರಹ ಚಿತ್ರ)
ಸೇಬಿನ ಹಾರ(ಸಂಗ್ರಹ ಚಿತ್ರ)
ಬೆಂಗಳೂರು: ಹಿಂದೆಲ್ಲಾ ಚುನಾವಣೆಗಳಲ್ಲಿ ರಾಜಕೀಯ. ನಾಯಕರುಗಳಿಗೆ ಹೂವಿನ ಹಾರ ಹಾಕುತ್ತಿದ್ದರು, ಆದರೆ ಈಗ ಟ್ರೆಂಡ್ ಬದಲಾಗಿದೆ, ಹೂವಿನ ಜಾಗಕ್ಕೆ ಹಣ್ಣುಗಳು ಬಂದು ಕೂತಿವೆ, ಸೇಬು, ಮೂಸಂಬಿ, ಅಂಜೂರ, ಬಾದಾಮಿ, ಗೋಡಂಬಿ, ಸ್ಟ್ರಾಬೆರಿ, ದಾಳಿಂಬೆ ಮತ್ತು ಒಣದ್ರಾಕ್ಷಿ ಹಾರಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಅವುಗಳ ಬೆಲೆ ಕೂಡ ಗಗನಕ್ಕೇರಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರದಲ್ಲಿ ತಮ್ಮ ಪುತ್ರ ನಿಖಿಲ್ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದರು, ಈ ವೇಳೆ  ಕುಮಾರ ಸ್ವಾಮಿ ಅವರಿಗೆ ಒಣ ದ್ರಾಕ್ಷಿ ಹಾರ ಹಾಕಿ ಗೌರವಿಸಲಾಗಿತ್ತು. 220 ಕೆಜಿ ತೂಕದ 14 ಅಡಿ ಒಣದ್ರಾಕ್ಷಿ ಹಾರವನ್ನು 10 ಕೆಲಸಗಾರರು ಸುಮಾರು 15 ದಿನದಲ್ಲಿ ತಯಾರಿಸಿದ್ದರು.ಹೂವು ಮತ್ತು ಹಣ್ಣುಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಸಾಮಾನ್ಯವಾಗಿ ವ್ಯಾಪಾರಸ್ಥರ ಮುಖದಲ್ಲಿ ನಗು ಮೂಡಿಸಿದರೇ ಗ್ರಾಹಕರಿಗೆ ಬರೆ ಎಳೆದಿದೆ
ಮೈಸೂರು ದೇವರಾಜ ಮಾರುಕಟ್ಟೆಯ ಧನರಾಜ್ ಎಂಬುವರು ಹೂವು ಮತ್ತು ಹಣ್ಣಿನ  ಹಾರ ತಯಾರಿಸುತ್ತಾರೆ, ಜೆಡಿಎಸ್ ನಾಯಕರೊಬ್ಬರು ತಮ್ಮ ಬಳಿ ಬಂದು ಒಣದ್ರಾಕ್ಷಿ ಹಾರ ಮಾಡಿಕೊಡುವಂತೆ ಹೇಳಿದರು.ಒಣದ್ರಾಕ್ಷಿ ತುಂಬಾ ಸಣ್ಣದಿರುತ್ತದೆ,. ಸುಮಾರು 14 ಅಡಿ ಹಾರ ಮಾಡಲು ತುಂಬಾ ಸಮಯ ತೆಗೆದುಕೊಂಡಿತು, ಪ್ರತಿ ದಿನ 10 ಕೆಲಸಗಾರರು 2 ಕೆಜಿ ಒಣದ್ರಾಕ್ಷಿಯನ್ನು ಸೂಜಿಯ ಮೂಲಕ ಪೋಣಿಸಿ 15 ದಿನದಲ್ಲಿ ಹಾರ ತಯಾರಿಸಿದರು. 
ದ್ರಾಕ್ಷಿ ಹಾರ ತುಂಬಾ ಚೆನ್ನಾಗಿ ಕಾಣಬೇಕೆಂದು ಮಧ್ಯದಲ್ಲಿ ಹೂವನ್ನು ಸೇರಿಸಿದ್ದಾರೆ, ಲಾರಿಯಲ್ಲಿ ಮೈಸೂರಿನಿಂದ ಕೆಆರ್ ಎಸ್ ಗೆ ಕಳುಹಿಸಲಾಯಿತು ಎಂದು ಹೇಳಿದ್ದಾರೆ,. ಮತ್ತೊಬ್ಬರು ಬಾದಾಮಿ ಹಾರ ಮಾಡಿಕೊಡಲು ಹೇಳಿದರು, 12 ಅಡಿ ಬಾದಾಮಿ ಹಾರಕ್ಕೆ 120 ಕೆಜಿ ಬಾದಾಮಿ ಬಳಸಿದೆವು, ಅದಕ್ಕಾಗಿ ಸುಮಾರು ಒಂದೂವರೆ ಲಕ್ಷ ರು ಹಣ ಖರ್ಚಾಯಿತು.ಬಾದಾಮಿಯನ್ನು 10 ಗಂಟೆ ನೀರಿನಲ್ಲಿ ನೆನೆಸಿ ನಂತರ ಸೂಜಿಗೆ ಹಾಕಿ ಪೋಣಿಸಲಾಯಿತು ಎಂದು ಹೇಳಿದ್ದಾರೆ,
ಮೈಸೂರಿನಂತೆಯೇ ಬೆಂಗಳೂರಿನ ಕೆ,ಆರ್ ಮಾರುಕಟ್ಟೆಯಲ್ಲಿ ರಾಜು ಎಂಬುವರು ಸೇಬಿನ ಹಾರ ತಯಾರಿಸುತ್ತಾರೆ, ಚುನಾವಣೆ ಸಮಯವಾದ್ದರಿಂದ ಸೇಬಿನ ಹಾರ ತಯಾರಿಕೆಯಲ್ಲಿ ಬ್ಯುಸಿಯಾಗಿದ್ದಾರೆ, ಇತ್ತೀಚೆಗೆ ರಾಜಕೀಯ ಪಕ್ಷವೊಂದು 250 ಕೆಜಿ ತೂಕದ ಸೇಬಿನ ಹಾರಕ್ಕೆ ಆರ್ಡರ್ ನೀಡಿತ್ತು, ಇದರ ಬೆಲೆ 55 ಸಾವಿರ ರೂ ಆಗಿತ್ತು, ನಾವು ಹೊರ ರಾಜ್ಯಗಳಿಗೂ ಕೂಡ ಸೇಬಿನ ಹಾರ ಕಳುಹಿಸುತ್ತೇವೆ ಎಂದು ರಾಜು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com