ಚಿಕ್ಕೋಡಿಗೂ 'ಆರ್' ಅಕ್ಷರಕ್ಕೂ ಅವಿನಾಭಾವ ನಂಟು: ಅಭ್ಯರ್ಥಿ ಹೆಸರಿಗೂ ಮತ್ತು ಗೆಲುವಿಗೂ ಇದೇ ಬ್ರಹ್ಮಗಂಟು!

ಚುನಾವಣೆಯಲ್ಲಿ ಅಕ್ಷರಗಳು ಗೆಲ್ಲುತ್ತವೆ, ಇದು ಹೌದು ಎಂದಾದರೇ ಚಿಕ್ಕೋಡಿ ಲೋಕಸಭೆ ಕ್ಷೇತ್ರಕ್ಕೆ ಆರ್ ಅಕ್ಷರ ಅದೃಷ್ಟ, ಚಿಕ್ಕೋಡಿಯಿಂದ ಆರ್ ಅಕ್ಷರದಿಂದ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಳಗಾವಿ: ಚುನಾವಣೆಯಲ್ಲಿ ಅಕ್ಷರಗಳು ಗೆಲ್ಲುತ್ತವೆ, ಇದು ಹೌದು ಎಂದಾದರೇ ಚಿಕ್ಕೋಡಿ ಲೋಕಸಭೆ ಕ್ಷೇತ್ರಕ್ಕೆ ಆರ್ ಅಕ್ಷರ ಅದೃಷ್ಟ,  ಚಿಕ್ಕೋಡಿಯಿಂದ ಆರ್ ಅಕ್ಷರದಿಂದ ಸ್ಪರ್ಧಿಸಿದವರೆಲ್ಲರೂ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
1996 ರಲ್ಲಿ ಜ್ಯೋತಿಷಿಗಳ ಸಲಹೆ ಮೇರೆಗೆ ಆರ್ ಹೆಸರಿನ ಅಭ್ಯರ್ಥಿಯನ್ನು ಜೆಡಿಎಸ್ ಪಕ್ಷ ಚಿಕ್ಕೋಡಿಯಿಂದ ಕಣಕ್ಕಿಳಿಸಿತ್ತು, ರಾಮಕೃಷ್ಣ ಹೆಗಡೆ  ಈ ಸಂಪ್ರದಾಯ ಆರಂಭಿಸಿದರು, ಅದೃಷ್ಟವಶಾತ್ ರತ್ನಮಾಲಾ ಸವಣೂರು ಗೆಲುವು ಸಾಧಿಸಿದರು. ಕೂಡ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು, ಅದಾದ ನಂತರ 2009 ರವರೆಗೂ ಆರ್ ಹೆಸರಿನ ಅಭ್ಯರ್ಥಿಗಳೇ ಗೆಲುವಿನ ವಿಜಯಮಾಲೆ ಧರಿಸಿದ್ದಾರೆ.
2014ರಲ್ಲಿ ಕಾಂಗ್ರೆಸ್ ನ ಪ್ರಕಾಶ್ ಹುಕ್ಕೇರಿ ಈ ಸಂಪ್ರದಾಯ ಮುರಿದರು, ಅವರು ಎರಡು ಬಾರಿ ಸ್ಪರ್ಧಿಸಿ ಗೆದ್ದಿದ್ದಾರೆ, ಅವರ ಎದುರಾಳಿ ಬಿಜೆಪಿಯ ಅಣ್ಣ ಸಾಹೇಬೇ ಜೊಲ್ಲೆ ಅವರಿಗೆ ಆರ್. ಅಕ್ಷರದ ಬೆಂಬಲವಿಲ್ಲ,.ಬಿಜೆಪಿ ರಮೇಶ್ ಕತ್ತಿ ಹೆಸರನ್ನು ಬಹುತೇಕ ಅಂತಿಮಗೊಳಿಸಿತ್ತು, ಆದರೆ ಅಂತಿಮ ಹಂತದಲ್ಲಿ ರಮೇಶ್ ಕತ್ತಿ ಅವರಿಗೆ ಟಿಕೆಟ್ ತಪ್ಪಿ ಆರ್ ಎಸ್ ಎಸ್ ಬೆಂಬಲಿತ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ನೀಡಿದೆ. 
ಆರ್ ಅಕ್ಷರಕ್ಕೂ ಮತ್ತು ಚಿಕ್ಕೋಡಿ ಲೋಕಸಭೆ ಕ್ಷೇತ್ರಕ್ಕೂ ಇರುವ ಸಂಬಂಧದ ಬಗ್ಗೆ ಕಾಂಗ್ರೆಸ್ ಸಂಸದ ಶಂಕರಾನಂದ ಹೇಳುವ ಕಥೆ ಬಹಳ ಆಸಕ್ತಿದಾಯಕವಾಗಿದೆ, 1996 ರಲ್ಲಿ ಜೆಡಿಎಸ್ ನ ರತ್ನಮಾಲಾ ಸವಣೂರು,  1998 ರಲ್ಲಿ ರಮೇಶ್ ಜಿಗಜಿಣಗಿ, 1999ರಲ್ಲಿ ಶಂಕರಾನಂದ ಪುತ್ರ ಪ್ರದೀಪ್ ಕಣಗಲಿ ಅವರನ್ನು ರಮೇಶ್ ಜಿಗಜಿಣಗಿ ಮತ್ತೆ ಸೋಲಿಸಿದರು.
2004 ಮತ್ತು 2009 ರಲ್ಲಿ ಮತ್ತೆ ಆರ್ ಅಕ್ಷರ ತನ್ನ ಚಮತ್ಕಾರ ತೋರಿತ್ತು, ರಮೇಶ್ ಜಿಗಜಿಣಗಿ ಮತ್ತು ರಮೇಶ್ ಕತ್ತಿ ಆಯ್ಕೆಯಾಗಿದ್ದರು. ಆದರೆ 2014 ರಲ್ಲಿ ಕಾಂಗ್ರೆಸ್ ಪ್ರಕಾಶ್ ಹುಕ್ಕೇರಿ ಅವರನ್ನು ಕಣಕ್ಕಿಳಿಸಿದ್ದರಿಂದ ಆರ್ ಅಕ್ಷರದ ಮ್ಯಾಜಿಕ್ ನಡೆಯಲಿಲ್ಲ, ಪ್ರಕಾಶ್ ಹುಕ್ಕೇರಿ ಎದುರು ಬಿಜೆಪಿಯ ರಮೇಶ್ ಕತ್ತಿ ಸೋತರು., 1996 ರಲ್ಲಿ ಪ್ರಖ್ಯಾತ ಜ್ಯೋತಿಷಿಯೊಬ್ಬರ ಸಲಹೆಯಂತೆ ಈ ವಿಧಾನ ಆರಂಭವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com