ಮಧ್ಯಪ್ರದೇಶ: ಬೆಟ್ಟಿಂಗ್ ನಲ್ಲಿ ಸೋತಿದ್ದಕ್ಕೆ ತಲೆ ಬೋಳಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತ

ಮುಂದಿನ ಪ್ರಧಾನ ಮಂತ್ರಿ ಯಾರು ಆಗುತ್ತಾರೆ ಎನ್ನುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತನೊಂದಿಗೆ ಕಟ್ಟಿದ ಬೆಟ್ಟಿಂಗ್ ನಲ್ಲಿ ಸೋತ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ತಲೆ ಬೋಳಿಸಿಕೊಂಡಿರುವ ಘಟನೆ ಮಧ್ಯಪ್ರದೇಶದ ರಾಜಗಢದಲ್ಲಿ ನಡೆದಿದೆ.
ತಲೆ ಬೋಳಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತ
ತಲೆ ಬೋಳಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತ

ರಾಜಗಢ:  ಮುಂದಿನ ಪ್ರಧಾನ ಮಂತ್ರಿ ಯಾರು ಆಗುತ್ತಾರೆ ಎನ್ನುವುದಕ್ಕೆ ಸಂಬಂಧಿಸಿದಂತೆ  ಬಿಜೆಪಿ ಕಾರ್ಯಕರ್ತನೊಂದಿಗೆ ಕಟ್ಟಿದ ಬೆಟ್ಟಿಂಗ್ ನಲ್ಲಿ ಸೋತ  ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ತಲೆ ಬೋಳಿಸಿಕೊಂಡಿರುವ ಘಟನೆ ಮಧ್ಯಪ್ರದೇಶದ ರಾಜಗಢದಲ್ಲಿ ನಡೆದಿದೆ.

ಒಂದು ವೇಳೆ ಮೋದಿ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುವುದಾಗಿ ರಾಜಘಡದ ಬಾಪು ಲಾಲ್ ಸೇನ್  ಬೆಟ್ಟಿಂಗ್  ಕಟ್ಟಿದ್ದರೆ, ರಾಹುಲ್  ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುವುದಾಗಿ ಬಿಜೆಪಿಯ ಕಾರ್ಯಕರ್ತ ರಾಮ್ ಬಾಬು ಮ್ಯಾಂಡ್ ಲಾಯ್  ಬೆಟ್ಟಿಂಗ್ ಕಟ್ಟಿದ್ದಾರೆ.ಆದರೆ, ಬೆಟ್ಟಿಂಗ್ ನಲ್ಲಿ ಸೋತ ಹಿನ್ನೆಲೆಯಲ್ಲಿ ಕಾಂಗ್ರೆಸ್  ಕಾರ್ಯಕರ್ತ ಲಾಲ್ ಸೇನ್  ಈಗ ತಮ್ಮ ತಲೆಯನ್ನು ಬೋಳಿಸಿಕೊಂಡಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಬೆಟ್ಟಿಂಗ್ ಮಧ್ಯಪ್ರದೇಶದ ತಳಮಟ್ಟದ ಕಾರ್ಯಕರ್ತರಲ್ಲಿದ್ದ ಕುತೂಹಲಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಬಾಪು ಲಾಲ್ ಸೇನ್  ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ನಂತರ ತಲೆ ಬೋಳಿಸಿಕೊಂಡಿದ್ದಾರೆ.

ರಾಜಗಢದ ಹರಣಾ ಹಳ್ಳಿಯಲ್ಲಿ ಜನರ ಸಮ್ಮುಖದಲ್ಲಿ ಲಾಲ್  ಸೇನ್  ತಲೆ ಬೋಳಿಸಿಕೊಂಡಿದ್ದು, ರೈತರ ಸಾಲ ಮನ್ನಾ  ಕುರಿತಂತೆ ಸರ್ಕಾರ  ನೀಡಿದ ಭರವಸೆಯನ್ನು ಈಡೇರಿಸದಿದ್ದಕ್ಕೆ  ಕಾಂಗ್ರೆಸ್ ಸೋಲನ್ನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com