'ಕೈ'ಗೆ ಸಂಕಷ್ಟ: ಒಂದೇ ವರ್ಷಕ್ಕೆ ಕಾಂಗ್ರೆಸ್‍ನಿಂದ ಬೇಸತ್ತು ಹೊರ ಬಂದ ಯುವ ನಾಯಕ ಅಲ್ಪೇಶ್ ಠಾಕೂರ್!

ಗುಜರಾತ್ ನಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿಗೆ ತಲೆನೋವಾಗಿದ್ದ ಪ್ರಬಲ ಹಿಂದುಳಿದ ವರ್ಗಗಳ ಯುವ ನೇತಾರ ಅಲ್ಪೇಶ್ ಠಾಕೂರ್ ಕಾಂಗ್ರೆಸ್ ಸೇರಿದ ಒಂದು ವರ್ಷದಲ್ಲೇ ಪಕ್ಷ ತೊರೆದು ಹೊರಬಂದಿದ್ದಾರೆ.
ಅಲ್ಪೇಶ್ ಠಾಕೂರ್
ಅಲ್ಪೇಶ್ ಠಾಕೂರ್
ನವದೆಹಲಿ: ಗುಜರಾತ್ ನಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿಗೆ ತಲೆನೋವಾಗಿದ್ದ ಪ್ರಬಲ ಹಿಂದುಳಿದ ವರ್ಗಗಳ ಯುವ ನೇತಾರ ಅಲ್ಪೇಶ್ ಠಾಕೂರ್ ಕಾಂಗ್ರೆಸ್ ಸೇರಿದ ಒಂದು ವರ್ಷದಲ್ಲೇ ಪಕ್ಷ ತೊರೆದು ಹೊರಬಂದಿದ್ದಾರೆ.
ಕೋಲಿ ಠಾಕೂರ್ ಸಮುದಾಯಕ್ಕೆ ಸೇರಿದ ಅಲ್ಪೇಶ್ ಠಾಕೂರ್ 2017ರ ಅಕ್ಟೋಬರ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. ಈಗ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಒಂದು ದಿನ ಮುಂಚೆ ಅಲ್ಪೇಶ್ ಠಾಕೂರ್ ಕಾಂಗ್ರೆಸ್ ತೊರೆದಿರುವುದು ತಮಗೆ ಲಾಭವಾಗಬಹುದಾ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇದೆ. 
ಗುಜರಾತ್ ನಲ್ಲಿ ಬಿಜೆಪಿಗೆ ತ್ರಿವಳಿ ಯುವ ಮುಖಂಡರಾದ ಅಲ್ಪೇಶ್ ಠಾಕೂರ್, ಹಾರ್ದಿಕ್ ಪಟೇಲ್ ಮತ್ತು ಜಿಗ್ನೇಶ್ ಮೇವಾನಿ ತಲೆನೋವಾಗಿ ಪರಿಣಮಿಸಿದ್ದರು. ಹಾರ್ದಿಕ್ ಪಟೇಲ್ ಪಾಟೀದಾರ್ ಆಂದೋಲನದ ಮೂಲಕ ಯುವ ನಾಯಕನಾಗಿ ಹೊರಹೊಮ್ಮಿದ್ದರು. 
ಅಲ್ಪೇಶ್ ಠಾಕೂರ್ 2011ರಲ್ಲಿ ಗುಜರಾತ್ ಕ್ಷತ್ರಿಯ ಠಾಕೂರ್ ಸೇನಾ ಎಂಬ ಸಂಘಟನೆ ಕಟ್ಟಿ ಹೋರಾಟ ಮಾಡಿದ್ದರು. ಹಾಗೆಯೇ ಓಬಿಸಿ, ಎಸ್ಸಿ-ಎಸ್ಟಿ ಏಕತಾ ವೇದಿಕೆ ನಿರ್ಮಿಸಿ ಹಿಂದುಳಿದ ಹಾಗೂ ಶೋಷಿತ ಸಮುದಾಯಗಳಿಗೆ ಮೀಸಲಾತಿ ದೊರಕಿಸುವ ಆಂದೋಲನ ನಡೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com