ಕಳಂಕಿತ ರಾಜಕಾರಣಿಗಳು ಸತ್ಯದ ಪಾಲಕರಾಗುತ್ತಾರೆಯೇ? ಲಾಲೂ ಗೆ ಪ್ರಶಾಂತ್ ಕಿಶೋರ್ ತಿರುಗೇಟು

ತಮ್ಮ ಮಾತುಕತೆ ವೇಳೆ ಏನು ನಡೆದಿದೆ, ಯಾರು ಏನು ಹೇಳಿದರು ಎಂದು ಮಾಧ್ಯಮಗಳ ಮುಂದೆ...
ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಮತ್ತು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್
ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಮತ್ತು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್
ಪಾಟ್ನಾ: ತಮ್ಮ ಮಾತುಕತೆ ವೇಳೆ ಏನು ನಡೆದಿದೆ, ಯಾರು ಏನು ಹೇಳಿದರು ಎಂದು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲು ಸಿದ್ದನಿದ್ದೇನೆ ಎಂದು ಸಂಯುಕ್ತ ಜನತಾದಳ ಜೆಡಿ(ಯು) ನಾಯಕ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಜೆಡಿಯು ಮತ್ತು ಆರ್ ಜೆಡಿಯನ್ನು ವಿಲೀನಗೊಳಿಸುವ ಪ್ರಸ್ತಾಪ ಮುಂದಿಟ್ಟುಕೊಂಡು ಪ್ರಶಾಂತ್ ಕಿಶೋರ್ ತಮ್ಮ ಪತಿಯನ್ನು ಭೇಟಿ ಮಾಡಿದ್ದರು ಎಂದು ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ನಿನ್ನೆ ಹೇಳಿದ್ದಕ್ಕೆ ಈ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಸಂಯುಕ್ತ ಜನತಾದಳದ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಕಿಶೋರ್, ಲಾಲೂ ಪ್ರಸಾದ್ ವಿರುದ್ಧ ಇದೇ ಸಂದರ್ಭದಲ್ಲಿ ಹರಿಹಾಯ್ದಿದ್ದು, ಸಾರ್ವಜನಿಕ ಕಚೇರಿಯನ್ನು ದುರುಪಯೋಗಪಡಿಸಿಕೊಂಡವರು ಮತ್ತು ಹಣವನ್ನು ದುರುಪಯೋಗಪಡಿಸಿಕೊಂಡವರು ಇಂದು ಸತ್ಯದ ಪಾಲಕರಂತೆ ವರ್ತಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
 ತಾವು ಲಾಲೂ ಪ್ರಸಾದ್ ಯಾದವ್ ವಿರುದ್ಧ ಮಾಧ್ಯಮಗಳ ಎದುರು ಕುಳಿತು ಯಾವಾಗ ಬೇಕಾದರೂ ಮಾತುಕತೆ ನಡೆಸಲು ತಯಾರಿದ್ದೇನೆ. ತಮ್ಮ ಮಾತುಕತೆ ಏಕೆ ನಡೆಯಿತು, ಮಾತುಕತೆಯಲ್ಲಿ ಯಾರು ಏನು ನೀಡಲು ಮುಂದೆ ಬಂದಿದ್ದರು ಎಂದು ಹೇಳಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದಾರೆ.
ಆರ್ ಜೆಡಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯುವನ್ನು ವಿಲೀನಗೊಳಿಸುವ ಪ್ರಸ್ತಾವನೆ ಮುಂದಿಟ್ಟುಕೊಂಡು ಕಿಶೋರ್ ಕುಮಾರ್ ತಮ್ಮ ಪತಿಯನ್ನು ಭೇಟಿ ಮಾಡಿದ್ದರು ಎಂದು ನಿನ್ನೆ ರಾಬ್ರಿದೇವಿ ಹೇಳಿಕೊಂಡಿದ್ದರು. ಈ ಮೂಲಕ ಲೋಕಸಭೆ ಚುನಾವಣೆ ಮುನ್ನ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಾಗಿತ್ತು ಎಂದು ರಾಬ್ರಿ ದೇವಿ ಹೇಳಿದ್ದರು. ಒಂದು ವೇಳೆ ಕಿಶೋರ್ ನನ್ನ ಮಾತು ಸುಳ್ಳು ಎಂದು ಹೇಳಿದರೆ ಅವರು ಶುದ್ಧ ಸುಳ್ಳು ಹೇಳುತ್ತಾರೆ ಎಂದು ಕೂಡ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com