• Tag results for ಬಿಹಾರ

ಸರ್ಕಾರಿ ಆಪ್ ಇನ್ನೋವೇಷನ್ ಸವಾಲು: ಪ್ರಶಸ್ತಿ ಗೆದ್ದ ಬಿಹಾರ ಮೂಲದ ಐಟಿ ಇಂಜಿನಿಯರ್ ನ ಕ್ಯಾಪ್ಷನ್ ಪ್ಲಸ್!

ಆತ್ಮನಿರ್ಭರ ಭಾರತ ಆಪ್ ಇನ್ನೋವೇಷನ್ ಚಾಲೆಂಜ್ ನಲ್ಲಿ ಬಿಹಾರದ ಮೂಲದ ಐಟಿ ಇಂಜಿನಿಯರ್ ಅನುರಾಗ್ ಕುಮಾರ್ ತಮ್ಮ ಕ್ಯಾಪ್ಷನ್ ಪ್ಲಸ್ ಎಂಬ ಆಪ್ ಗೆ ಉನ್ನತ ಪ್ರಶಸ್ತಿಯನ್ನು ಗೆದ್ದಿದ್ದಾರೆ. 

published on : 10th August 2020

ಬಿಹಾರ ಚುನಾವಣೆಗೆ ರಾಹುಲ್ ಮಾಸ್ಟರ್ ಪ್ಲಾನ್: ಕೊರೋನಾ-ಪ್ರವಾಹದ ವೇಳೆ ಜನರ ದನಿಯಾಗಲು ಕಾರ್ಯಕರ್ತರಿಗೆ ಸೂಚನೆ

ಅಕ್ಟೋಬರ್ ನಲ್ಲಿ ಬಿಹಾರ ವಿಧಾನ ಸಭೆ ಚುನಾವಣೆ ಎದುರಾಗಲಿದ್ದು, ಎಐಸಿಸಿ ನಾಯಕ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ. ಬಿಹಾರದಲ್ಲಿ ಕೊರೋನಾ ವೈರಸ್ ಮತ್ತು ಪ್ರವಾಹದಂತ ಸಂದರ್ಭದಲ್ಲಿ ಜನರ ದನಿಯಾಗಬೇಕೆಂದು ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಬೇಕೆಂದು  ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

published on : 7th August 2020

ಸುಶಾಂತ್ ಪ್ರಕರಣ: ಐಪಿಎಸ್ ಅಧಿಕಾರಿಗೆ ಮುಂಬೈ ನಿಂದ ಹೊರಡಲು ಬಿಡದಿದ್ದರೆ ಕಾನೂನು ಕ್ರಮ- ಬಿಹಾರ ಡಿಜಿಪಿ 

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜ್ಪೂತ್ ಸಾವಿನ ಕುರಿತ ತನಿಖೆ ನಡೆಸಲು ಮುಂಬೈ ಗೆ ತೆರಳಿರುವ ಬಿಹಾರದ ಅಧಿಕಾರಿಗೆ ವಾಪಸ್ಸಾಗಲು ಬಿಡದೇ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಹಾರದ ಡಿಜಿಪಿ ಎಚ್ಚರಿಸಿದ್ದಾರೆ. 

published on : 6th August 2020

ನಟ ಸುಶಾಂತ್ ಸಿಂಗ್ ಸಾವು ಪ್ರಕರಣ: ಸಿಬಿಐಗೆ ತನಿಖೆ ಜವಾಬ್ದಾರಿ, ಬಿಹಾರ ಸರ್ಕಾರದ ಮಹತ್ವದ ನಿರ್ಧಾರ

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಪ್ರಕರಣ ಸಂಬಂಧ ಬಿಹಾರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದೆ ಎಂದು ಮಂಗಳವಾರ ತಿಳಿದುಬಂದಿದೆ. 

published on : 4th August 2020

ಬಿಹಾರ: ಲಾಕ್ ಡೌನ್ ಸಮಯದಲ್ಲಿ ಆಟೋ ಓಡಿಸಿ ಕುಟುಂಬಕ್ಕೆ ಹೆಗಲಾಗಿರುವ 14 ವರ್ಷದ ಬಾಲಕಿ

ಲಾಕ್ ಡೌನ್ ಸಮಯದಲ್ಲಿ ಆಟೋ ರಿಕ್ಷಾ ಓಡಿಸಿ ತನ್ನ ಕುಟುಂಬದ ಆರ್ಥಿಕ ಅಗತ್ಯಗಳನ್ನು ಬಿಹಾರದ ಸಸರಮ್ ಜಿಲ್ಲೆಯ 14 ವರ್ಷದ ಬಾಲಕಿಯೊಬ್ಬಳು ಈಡೇರಿಸುತ್ತಿದ್ದಾಳೆ.

published on : 27th July 2020

ಗಡಿಯಲ್ಲಿ ಭಾರತೀಯರ ಮೇಲೆ ನೇಪಾಳ ಪೊಲೀಸರಿಂದ ಗುಂಡಿನ ದಾಳಿ, ಓರ್ವನ ಸ್ಥಿತಿ ಗಂಭೀರ

ಬಿಹಾರದ ಕಿಸಾನ್ ಗಂಜ್ ನ ಭಾರತ-ನೇಪಾಳ ಗಡಿಯಲ್ಲಿ ನೇಪಾಳ ಪೊಲೀಸರು ಭಾರತೀಯರ ಮೇಲೆ ಗುಂಡಿನ ದಾಳಿ ನಡೆಸಿದ್ದು ಓರ್ವ ಗಾಯಗೊಂಡಿದ್ದಾರೆ.

published on : 20th July 2020

ಬಿಹಾರದಲ್ಲಿ ಸಿಡಿಲು ಬಡಿದು 10 ಮಂದಿ ಸಾವು: ತಲಾ 4 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಬಿಹಾರದ ಏಳು ಜಿಲ್ಲೆಗಳಲ್ಲಿ ಸಿಡಿಲು ಬಡಿದು ಹತ್ತು ಮಂದಿ ಸಾವನ್ನಪ್ಪಿರುವ ಘಟನೆಗಳ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಘಟನೆಗಳಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ತಲಾ 4 ಲಕ್ಷ ರೂ ಪರಿಹಾರ ಪ್ರಕಟಿಸಿದ್ದಾರೆ.

published on : 19th July 2020

ಬಿಹಾರ ಸಿಎಂ ನಿತೀಶ್ ಕುಮಾರ್ ಉದ್ಘಾಟಿಸಿದ್ದ ಸೇತುವೆ ತಿಂಗಳಲ್ಲೇ ಕುಸಿತ!

ಗೋಪಾಲ್​ಗಂಜ್ ಮತ್ತು ಈಸ್ಟ್ ಚಂಪರನ್ ಭಾಗಗಳಿಗೆ ಕೊಂಡಿಯಾಗಿದ್ದ 1.4 ಕಿಮೀ ಉದ್ದದ ಸೇತುವೆಯ ಒಂದು ಭಾಗ ಕುಸಿದುಬಿದ್ದಿದೆ. ಗಂಡಕ ನದಿಯ ಮೇಲೆ ಕಟ್ಟಲಾಗಿರುವ ಈ ಸೇತುವೆ ಜೂನ್ 16ರಂದು ಉದ್ಘಾಟನೆಯಾಗಿತ್ತು. ಭಾರೀ ಮಳೆಯಿಂದಾಗಿ ಈ ಸೇತುವೆ ಬುಧವಾರ ಕುಸಿದಿದೆ.

published on : 16th July 2020

ಬಿಹಾರದಲ್ಲಿ ಎನ್'ಕೌಂಟರ್: ಭದ್ರತಾ ಪಡೆಗಳಿಂದ 4 ನಕ್ಸಲರ ಹತ್ಯೆ

ಬಿಹಾರ ರಾಜ್ಯದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಹ ಎಂಬ ಪ್ರದೇಶದಲ್ಲಿ ಭದ್ರತಾ ಪಡೆಗಳು ಎನ್'ಕೌಂಟರ್ ನಡೆಸಿದ್ದು ನಾಲ್ವರು ನಕ್ಸಲರನ್ನು ಹತ್ಯೆ ಮಾಡಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ. 

published on : 10th July 2020

ಬಿಹಾರ: ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ 300 ಮಂದಿ ಪೈಕಿ 80 ಮಂದಿಗೆ ಕೊರೋನಾ, ಮದುಮಗ ಸಾವು!

ಕೊರೋನಾ ವೈರಸ್ ಕುರಿತಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರು, ಹಲವೆಡೆ ಜನರು ಆತಂಕವಿಲ್ಲದೆ ವರ್ತಿಸುತ್ತಿದ್ದಾರೆ. ಬಿಹಾರದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ 300 ಮಂದಿ ಪೈಕಿ ಇದೀಗ 80 ಮಂದಿಯಲ್ಲಿ ಕೊರೋನಾ ದೃಢಪಟ್ಟಿರುವುದು ಬೆಳಕಿಗೆ ಬಂದಿದೆ. 

published on : 30th June 2020

ಚೀನಾ ಹೂಡಿಕೆ: ಬಿಹಾರದಲ್ಲಿ 2,900 ಕೋಟಿ ರೂ. ಮೌಲ್ಯದ ಸೇತುವೆ ಯೋಜನೆ ಕೇಂದ್ರದಿಂದ ರದ್ದು

ಚೀನಾ ಭಾರತ ಗಡಿ ಪ್ರದೇಶದಲ್ಲಿ ಘರ್ಷಣೆಯ ಪರಿಣಾಮವಾಗಿ ಭಾರತದಲ್ಲಿ ಚೀನಾ ಹೂಡಿಕೆಯಿರುವ ಅನೇಕ ಯೋಜನೆಗಳನ್ನು ರದ್ದುಗೊಳಿಸಲಾಗುತ್ತಿದೆ. ಈಗ ಈ ಸಾಲಿಗೆ ಬಿಹಾರದ ಗಂಗಾ ನದಿಗೆ ಕಟ್ಟಬೇಕಾಗಿದ್ದ ಸೇತುವೆ ಯೋಜನೆಯೂ ಸೇರ್ಪಡೆಯಾಗಿದೆ. 

published on : 29th June 2020

ಬಿಹಾರ ಸಿಡಿಲು ಬಡಿದು ದುರಂತ: ಸಾವಿನ ಸಂಖ್ಯೆ 92ಕ್ಕೆ ಏರಿಕೆ, 4 ಲಕ್ಷ ರೂ. ಪರಿಹಾರ ಘೋಷಿಸಿದ ಬಿಹಾರ ಸರ್ಕಾರ

ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಸಿಡಿಲಿಗೆ ಸಾವಿಗೀಡಾದವರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ ಎಂದು ಬಿಹಾರ ಸರ್ಕಾರ ಮಾಹಿತಿ ನೀಡಿದೆ.

published on : 26th June 2020

ಬಿಹಾರ: ಸಿಡಿಲಿನ ಅಬ್ಬರಕ್ಕೆ 83 ಮಂದಿ ಬಲಿ: ಪರಿಹಾರ ಘೋಷಿಸಿದ ಸರ್ಕಾರ; ಪ್ರಧಾನಿ ಮೋದಿ ಸಂತಾಪ

ಸಿಡಿಲಿನ ಅಬ್ಬರಕ್ಕೆ ಬಿಹಾರದಲ್ಲಿ ಕಳೆದ ಎರಡು ದಿನಗಳಲ್ಲಿ ಬರೋಬ್ಬರಿ 83 ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.

published on : 26th June 2020

ಆರ್ ಜೆಡಿಗೆ ತೀವ್ರ ಹಿನ್ನಡೆ: ಐವರು ಎಂಎಲ್ ಸಿಗಳ ರಾಜೀನಾಮೆ, ಜೆಡಿಯು ಸೇರ್ಪಡೆ

ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರ ಆರ್ ಜೆಡಿಗೆ ತೀವ್ರ ಹಿನ್ನಡೆಯಾಗಿದ್ದು, ಆರ್ ಜೆಡಿಯ ಐವರು ಎಂಎಲ್ ಸಿಗಳು ಮಂಗಳವಾರ ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸೇರಿದ್ದಾರೆ.

published on : 23rd June 2020

ಬಿಹಾರ: ಗಡಿಯಲ್ಲಿ ನೇಪಾಳ ಸೇನೆಯಿಂದ ಗುಂಡಿನ ದಾಳಿ, ಓರ್ವ ಸಾವು, ಇಬ್ಬರಿಗೆ ಗಾಯ

ಬಿಹಾರದ ಸೀತಾಮರಿ ಜಿಲ್ಲೆಯ ಭಾರತ-ನೇಪಾಳ ಗಡಿಯಲ್ಲಿ ನೇಪಾಳ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಆರೋಪ ಕೇಳಿಬಂದಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಸೀಮಾ ಸುರಕ್ಷಾ ಬಲ(ಎಸ್ಎಸ್ ಬಿ) ಖಚಿತಪಡಿಸಿದೆ.

published on : 12th June 2020
1 2 3 4 5 6 >