

ಬಿಹಾರ: ಇತ್ತೀಚಿಗೆ ಮುಕ್ತಾಯವಾದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 'ಮನ್ರೇಗಾ' ಯೋಜನೆಯಿಂದ ಮಹಾತ್ಮ ಗಾಂಧೀಜಿ ಅವರ ಹೆಸರು ಕೈಬಿಡುವುದಕ್ಕೆ NDA ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಈಗ ಮತ್ತೆ ಎನ್ ಡಿಎ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ. ಬಿಹಾರದ ಪ್ರಗತಿ ನೋಡಿ ಸಂತೋಷವಾಗುತ್ತಿದೆ ಎಂದಿದ್ದಾರೆ.
ನಿತೀಶ್ ಕುಮಾರ್ ಸರ್ಕಾರದ ಮೂಲಸೌಕರ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್‌ನ ಪ್ರತಿಸ್ಪರ್ಧಿ ಬಿಜೆಪಿಯು ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಿದೆ.
ನಳಂದ ವಿಶ್ವವಿದ್ಯಾಲಯದಲ್ಲಿ ಮೊದಲ ನಳಂದ ಸಾಹಿತ್ಯೋತ್ಸವದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ಮೂಲಸೌಕರ್ಯಗಳು ಈ ಹಿಂದೆ ನಾನು ಕೇಳಿದ್ದಕ್ಕಿಂತ ಉತ್ತಮವಾಗಿದೆ ಎಂಬುದರಲ್ಲಿ ಯಾವುದೇ ಪ್ರಶ್ನೆಯಿಲ್ಲ ಎಂದರು.
ರಸ್ತೆಗಳು ಉತ್ತಮವಾಗಿವೆ. ಜನರು ತಡರಾತ್ರಿಯಲ್ಲೂ ಬೀದಿಯಲ್ಲಿರುತ್ತಾರೆ. ಇದು ಹಿಂದೆಂದೂ ಇರಲಿಲ್ಲ. ಇಲ್ಲಿಯವರೆಗೆ, ವಿದ್ಯುತ್, ನೀರು ಸೇರಿದಂತೆ ಎಲ್ಲವನ್ನೂ ಸಮರ್ಪಕವಾಗಿ ಪೂರೈಸಲಾಗುತ್ತಿದೆ ಎಂದರು.
ನನ್ನ ಪ್ರಕಾರ, ನಿಸ್ಸಂದೇಹವಾಗಿ, ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಒಳ್ಳೆಯ ಸಂಗತಿಗಳು ನಡೆದಿವೆ ಎಂದು ಹೇಳಿದ ಶಶಿ ತರೂರ್, ನಿತೀಶ್ ಕುಮಾರ್ ಬಗ್ಗೆ ಕೇಳಿದಾಗ ಸುಮ್ಮನಾದರು.
ನನ್ನನ್ನು ಇಲ್ಲಿ ರಾಜಕೀಯಕ್ಕೆ ಸೇರಿಸಬೇಡಿ. ಈ ಪ್ರಗತಿಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಬಿಹಾರದ ಜನರು ಮತ್ತು ಅವರ ಪ್ರತಿನಿಧಿಗಳು ಕ್ರೆಡಿಟ್ ಅರ್ಹರು ಎಂದಷ್ಟೇ ಹೇಳಿದರು.
Advertisement