

ಪಾಟ್ನಾ: ಉತ್ತರಾಖಂಡ ಸಚಿವೆ ಸಚಿವೆ ರೇಖಾ ಆರ್ಯ ಅವರ ಪತಿ ಗಿರ್ಧಾರಿ ಲಾಲ್ ಸಾಹು ಅವರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಹಾರದಲ್ಲಿ 20,000-25,000 ರೂಪಾಯಿಗೆ ಹುಡುಗಿರೂ ಸಿಗುತ್ತಾರೆ. ನಾವು ಬಿಹಾರದಿಂದ ಬ್ಯಾಚುಲರ್‌ಗಳಿಗಾಗಿ ಹುಡುಗಿಯರನ್ನು ತರುತ್ತೇವೆ ಎಂದು ಹೇಳಿರುವುದು ವಿಡಿಯೋದಲ್ಲಿ ಕಾಣಬಹುದು. ಗಿರ್ಧಾರಿ ಲಾಲ್ ಸಾಹು ಅವರ ಹೇಳಿಕೆ ಬಿಹಾರದಲ್ಲಿ ರಾಜಕೀಯ ಬಿಸಿ ಏರಿಸಿದೆ. ಬಿಜೆಪಿ ಮತ್ತು ಆರ್‌ಜೆಡಿ ಗಿರ್ಧಾರಿ ಲಾಲ್ ಸಾಹು ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.
ನೀವು ಮದುವೆಯಾಗಿಲ್ಲ. ಮದುವೆಗೆ ಸಿದ್ಧರಿದ್ದಿರಾ? ನಿಮಗೆ ನಾಲ್ಕು ಅಥವಾ ಐದು ಮಕ್ಕಳಿದ್ದರೂ ಬಿಹಾರದಲ್ಲಿ, 20,000-25,000 ರೂಪಾಯಿಗಳಿಗೆ ಹುಡುಗಿಯರು ಸಿಗುತ್ತಾರೆ. ಅವರನ್ನು ನೀವು ಮದುವೆಯಾಗಬಹುದು ಎಂದು ಹೇಳಿದ್ದಾರೆ. ಗಿರ್ಧಾರಿ ಲಾಲ್ ಸಾಹು ಅವರ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಇದು ಬಿಹಾರದ ಮಹಿಳೆಯರಿಗೆ ಮಾತ್ರವಲ್ಲದೆ ಇಡೀ ದೇಶದ ಅರ್ಧದಷ್ಟು ಜನಸಂಖ್ಯೆಗೆ ಮಾಡಿದ ಅವಮಾನ ಎಂದು ಬಿಹಾರ ಬಿಜೆಪಿ ವಕ್ತಾರ ಪ್ರಭಾಕರ್ ಮಿಶ್ರಾ ಹೇಳಿದ್ದಾರೆ. ಮಹಿಳೆಯರನ್ನು ಹಣದ ದೃಷ್ಟಿಯಿಂದ ಮೌಲ್ಯೀಕರಿಸುವ ಕಲ್ಪನೆಯು ಅನಾರೋಗ್ಯಕರ ಮನಸ್ಥಿತಿಯ ಉತ್ಪನ್ನವಾಗಿದೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಅಂತಹ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಉತ್ತರಾಖಂಡ ಸರ್ಕಾರದಲ್ಲಿರುವ ಸಚಿವರ ಪತಿ ಮಹಿಳೆಯರನ್ನು ಅವಮಾನಿಸುತ್ತಿದ್ದಾರೆ. ಮಹಿಳೆಯರಿಗೆ ಬೆಲೆ ಕಟ್ಟಲಾಗುತ್ತಿದೆ ಎಂದು ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಹೇಳಿದರು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಬಿಜೆಪಿ ಕ್ಷಮೆಯಾಚಿಸಬೇಕು. ಒಂದೆಡೆ, ಬಿಹಾರದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ 10,000 ರೂಪಾಯಿಗಳನ್ನು ನೀಡಲಾಗಿದ್ದರೆ, ಮತ್ತೊಂದೆಡೆ, ಬಿಜೆಪಿ ಸದಸ್ಯರೇ ಅವರನ್ನು ಅವಮಾನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಹೇಳಿಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಚಿವೆ ರೇಖಾ ಅವರ ಪತಿ ಗಿರ್ಧಾರಿ ಲಾಲ್ ಸಾಹು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹ ಮಾಡಲು ಬರೇಲಿಗೆ ಹೋಗುತ್ತೇನೆ. ರೇಖಾ ಚುನಾವಣೆಯಲ್ಲಿ ಸ್ಪರ್ಧಿಸುವ ಸ್ಥಳದ ಮಹಿಳೆಯರನ್ನು ಅವರು ದೇವತೆಗಳಂತೆ ಗೌರವಿಸುತ್ತಾರೆ. ನನ್ನ ಹೇಳಿಕೆಯ ಲಾಭ ಪಡೆಯಲು ವಿರೋಧ ಪಕ್ಷಗಳು ನನ್ನ ಮಾತನ್ನು ತಿರುಚಿವೆ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಕೈಮುಗಿದು ಕ್ಷಮೆಯಾಚಿಸುತ್ತೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.
Advertisement