ಈ ಬಗ್ಗೆ ಗುರುವಾರ ಚುನಾವಣಾ ಆಯೋಗ ತನ್ನ ಅಧಿಕೃತ ಆದೇಶ ಹೊರಡಿಸಿದ್ದು, 'ಚೌಕೀದಾರ್ ಚೋರ್ ಹೈ' ಜಾಹೀರಾತು ನಿಷೇಧಿಸಿದೆ. ಮೊದಲಿಗೆ ಮಧ್ಯಪ್ರದೇಶ ಕಾಂಗ್ರೆಸ್ ಘಟಕವು ಚೌಕೀದಾರ್ ಚೋರ್ ಹೈ ಎನ್ನುವ ಜಾಹೀರಾತು ಪ್ರಕಟಿಸುತ್ತಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ಮೊರೆ ಹೋಗಿತ್ತು. ಇದೀಗ ಬಿಜೆಪಿ ದೂರಿನ ಅನ್ವಯ ಈ ಜಾಹೀರಾತಿಗೆ ಆಯೋಗ ನಿರ್ಬಂಧ ಹೇರಿದೆ. ಇನ್ನೊಂದೆಡೆ ಸುಪ್ರೀಂಕೋರ್ಟ್ ನಲ್ಲಿಯೂ ಬಿಜೆಪಿ ದೂರು ದಾಖಲಿಸಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತಿತ್ತರೆ ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ ಎನ್ನಲಾಗಿದೆ.