ನವದೆಹಲಿ: ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಎರಡು ಕಡೆ ವೋಟರ್ ಐಡಿ ಹೊಂದಿದ್ದಾರೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷ(ಎಎಪಿ) ಶುಕ್ರವಾರ ದೂರು ದಾಖಲಿಸಿದೆ.
ಗೌತಮ್ ಗಂಭೀರ್ ಅವರು ದೆಹಲಿಯ ಕರೋಲ್ ಬಾಗ್ ಮತ್ತು ರಾಜಿಂದರ್ ನಗರ್ ಎರಡು ಕಡೆ ವೋಟರ್ ಐಡಿ ಹೊಂದಿದ್ದು, ಇದು ಕ್ರಿಮಿನಲ್ ಪ್ರಕರಣವಾಗಿದ್ದು, ಕೂಡಲೇ ಅವರನ್ನು ಅನರ್ಹಗೊಳಿಸಬೇಕು ಎಂದು ಪೂರ್ವ ದೆಹಲಿ ಎಎಪಿ ಅಭ್ಯರ್ಥಿ ಅತಿಶಿ ಅವರು ಟ್ವೀಟ್ ಮಾಡಿದ್ದಾರೆ.
ಈ ಸಂಬಂಧ ನಾವು ಗೌತಮ್ ಗಂಭೀರ್ ವಿರುದ್ಧ ತಿಸ್ ಹಜಾರಿ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದು, ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ ಮಾಜಿ ಕ್ರಿಕೆಟಿಗನಿಗೆ ಒಂದು ವರ್ಷದ ವರೆಗೆ ಗಂಭೀರ್ ಗೆ ಜೈಲು ಶಿಕ್ಷೆ ನೀಡಬೇಕೆಂದು ಅತಿಶಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಗೌತಮ್ ಗಂಭೀರ್ ಅವರು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
My appeal to the citizens of East Delhi Lok Sabha - pls don’t waste your vote by voting for @GautamGambhir; he is going to get disqualified sooner or later for having two Voter ID cards! अपना वोट व्यर्थ ना करें! #GambhirApradhpic.twitter.com/6bxGnT4n93