ಪ್ರಧಾನಿ ಮೋದಿ ಕುರ್ತಾ ಸೈಜ್ ದೀದಿಗೆ ಹೇಗೆ ಗೊತ್ತು? ರಾಜ್ ಬಬ್ಬರ್ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿ ಅವರ ಕುರ್ತಾ ಗಾತ್ರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಹೇಗೆ ಗೊತ್ತು ಎಂದು ಉತ್ತರ ಪ್ರದೇಶ ಹಿರಿಯ ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಕುಹಕವಾಡಿದ್ದಾರೆ.
ರಾಜ್ ಬಬ್ಬರ್
ರಾಜ್ ಬಬ್ಬರ್

ಕೊಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಅವರ ಕುರ್ತಾ ಗಾತ್ರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ  ಹೇಗೆ ಗೊತ್ತು ಎಂದು ಉತ್ತರ ಪ್ರದೇಶ ಹಿರಿಯ ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ವ್ಯಂಗ್ಯವಾಡಿದ್ದಾರೆ.

ಪ್ರತಿಪಕ್ಷದಲ್ಲೂ ತಮ್ಮಗೆ ಉತ್ತಮ ಸ್ನೇಹಿತರಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿವರ್ಷ ತಮ್ಮಗೆ  ಅವರೇ ಆಯ್ಕೆ ಮಾಡಿದ  ಕುರ್ತಾ ಹಾಗೂ ಸಿಹಿ ತಿಂಡಿಗಳನ್ನು ಕಳುಹಿಸಿ ಕೊಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು.

ಪಶ್ಚಿಮ ಬಂಗಾಳದ ಕುರ್ತಾ ಹಾಗೂ ಸ್ವೀಟ್ ವಿಶ್ವಾದಾದ್ಯಂತ ಪ್ರಸಿದ್ಧಿಯಾಗಿವೆ. ಇವುಗಳನ್ನು  ಮಮತಾ ಬ್ಯಾನರ್ಜಿ ಇವುಗಳನ್ನು ನಮಗೆ  ಮಾತ್ರವಲ್ಲ ಯಾರಿಗೂ ಕಳುಹಿಸುವುದಿಲ್ಲ, ಒಬ್ಬ ವ್ಯಕ್ತಿಗೆ ಮಾತ್ರ ಕಳುಹಿಸುತ್ತಾರೆ ಎಂದು ಆ ಕುರ್ತಾದ ಗಾತ್ರ ಆಕೆಗೆ ಗೊತ್ತು ಎಂಬುದು ಅರ್ಥವಾಗುತ್ತದೆ. ಮೋದಿ ಅವರ ಎದೆಯ ಇಂಚು 56 ಇಂಚು ಇದ್ದೆಯಾ ಅಥವಾ ಇಲ್ಲವೇ ಎಂಬುದನ್ನು ಪ್ರಶ್ನಿಸಬೇಕಾಗಿದೆ ಎಂದು ಅವರು ರಾಜ್ ಬಬ್ಬರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

'ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಬಂಗಾಳಿ ಸಿಹಿತಿಂಡಿಗಳ ವಿನಿಮಯದ ಸಂಪ್ರದಾಯ ಆರಂಭಿಸಿದರು. ಈ ವಿಚಾರ ತಿಳಿದ ಮಮತಾ ಬ್ಯಾನರ್ಜಿಯವರೂ ಬಂಗಾಳಿ ಸಿಹಿತಿಂಡಿಗಳನ್ನು ನನಗೆ ಕಳುಹಿಸಲು ಆರಂಭಿಸಿದರು' ಎಂದು ಮೋದಿ ಆಕ್ಷಯ್ ಕುಮಾರ್ ಜೊತೆಗಿನ ಸಂದರ್ಶನದಲ್ಲಿ ತಿಳಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಜಿಎಸ್ ಟಿ ಹಾಗೂ ನೋಟ್ ಅಮಾನ್ಯತೆ ಬಗ್ಗೆ ಬಹಿರಂಗವಾಗಿ ಟೀಕಿಸುತ್ತಿದ್ದ ಮಮತಾ ಬ್ಯಾನರ್ಜಿ ಜೊತೆಗಿನ ಈ ರೀತಿಯ ಉತ್ತಮ ಸಂಬಂಧ ಇದೆ ಎನ್ನುವುದು ಆಶ್ಚರ್ಯವನ್ನುಂಟುಮಾಡಿತ್ತು.ನೋಟ್ ಅಮಾನ್ಯತೆಯಿಂದ ತೊಂದರೆ ಅನುಭವಿಸಿರುವ ಪಶ್ಚಿಮ ಬಂಗಾಳದಲ್ಲಿ ಒಂದೇ ಒಂದು ಮತ ಕೂಡಾ ಬಿಜೆಪಿಗೆ ಬೀಳಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿಕೆನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com