ಈ ಬಗ್ಗೆ ಕಾಂಗ್ರೆಸ್ ಪಕ್ಷದ ವಕ್ತಾರ ಅಭಿಷೇಕ್ ಮನು ಸಂಘ್ವಿ, ತೃಣಮೂಲ ಕಾಂಗ್ರೆಸ್ ನ ದಿನೇಶ್ ತ್ರಿವೇದಿ ಮತ್ತು ರಾಜ್ಯ ಸಭೆ ಸದಸ್ಯ ಡೆರಿಕ್ ಒ ಬ್ರೇನ್ ಗಂಭೀರ ಆರೋಪ ಮಾಡಿದ್ದು, ಇವಿಎಂನಲ್ಲಿ 'ಕಮಲ' ಚಿಹ್ನೆ ಕೆಳಗೆ ಬಿಜೆಪಿ ಎಂದು ಬರೆದಿದೆ ಆರೋಪಿಸಿದ್ದಾರೆ. ಅಲ್ಲದೆ ಈ ಬಗ್ಗೆ ವಿಪಕ್ಷಗಳ ಸುಮಾರು 10 ಜನ ನಾಯಕರ ತಂಡ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ದೂರಿನಲ್ಲಿ ವಿವಾದಿತ ಇವಿಎಂ ನಲ್ಲಿ ಬಿಜೆಪಿಯ ಚಿನ್ಹೆ ಕಮಲದ ಅಡಿಯಲ್ಲಿರುವ ಬಿಜೆಪಿ ಅಕ್ಷರವನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದ್ದಾರೆ.