ಸರ್ಜಿಕಲ್ ಸ್ಟ್ರೈಕ್ ಏಕೆ ಬೇಕಿತ್ತು..? ಸಾಧ್ವಿ ಶಾಪ ಕೊಟ್ಟಿದ್ದರೆ ಸಾಕಿತ್ತು: ದಿಗ್ವಿಜಯ್ ಸಿಂಗ್ ವ್ಯಂಗ್ಯ

ಪ್ರಧಾನಿ ಮೋದಿ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಬದಲು ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ರಿಂದ ಶಾಪ ಕೊಡಿಸಿದ್ದರೆ ಸಾಕಿತ್ತು ಎಂದು ಕಾಂಗ್ರೆಸ್ ಮುಖಂಡ ಹಾಗೂ ಭೋಪಾಲ್‌ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ವ್ಯಂಗ್ಯವಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಭೋಪಾಲ್‌: ಪ್ರಧಾನಿ ಮೋದಿ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಬದಲು ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ರಿಂದ ಶಾಪ ಕೊಡಿಸಿದ್ದರೆ ಸಾಕಿತ್ತು ಎಂದು ಕಾಂಗ್ರೆಸ್ ಮುಖಂಡ ಹಾಗೂ ಭೋಪಾಲ್‌ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ವ್ಯಂಗ್ಯವಾಡಿದ್ದಾರೆ.
ಹುತಾತ್ಮ ಪೊಲೀಸ್‌ ಅಧಿಕಾರಿ ಹೇಮಂತ್‌ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ ಎಂದು ಹೇಳಿಕೆ ನೀಡಿದ್ದ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್ ಅವರಿಗೆ ತಿರುಗೇಟು ನೀಡಿರುವ ದಿಗ್ವಿಜಯ್ ಸಿಂಗ್, 'ಒಂದು ವೇಳೆ ಸಾಧ್ವಿ ಅವರೇನಾದರೂ ಮಸೂದ್‌ ಅಜರ್‌ಗೆ ಶಾಪ ನೀಡಿದ್ದರೆ, ಸರ್ಜಿಕಲ್‌ ಸ್ಟ್ರೈಕ್‌ ಅವಶ್ಯತೆಯೇ ಇರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಭೋಪಾಲ್‌ ಇಲ್ಲಿನ ಅಶೋಕ ಗಾರ್ಡನ್ ನಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ದಿಗ್ವಿಜಯ್ ಸಿಂಗ್‌, 'ದೇಶಕ್ಕಾಗಿ ಮಹಾತ್ಯಾಗವನ್ನು ಮಾಡಿ ಹುತಾತ್ಮ ಎನಿಸಿಕೊಂಡಿರುವ ಭಯೋತ್ಪಾದನೆ ನಿಗ್ರಹ ದಳದ(ಎಟಿಎಸ್‌) ಮುಖ್ಯಸ್ಥ ಕರ್ಕರೆ ಅವರಿಗೆ ಶಾಪ ನೀಡಿದ್ದಾಗಿ ಸಾಧ್ವಿ ಅವರು ಹೇಳಿಕೊಂಡಿದ್ದಾರೆ. ಒಂದು ವೇಳೆ ಅವರು ಅವರೇನಾದರೂ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಷ್ಇಮೊಹಮ್ಮದ್‌ ನಾಯಕ ಮಸೂದ್‌ ಅಜರ್ ಗೆ ಶಾಪ ನೀಡಿದ್ದರೆ, ಸರ್ಜಿಕಲ್ ದಾಳಿ ಮಾಡಬೇಕಾದ ಅಗತ್ಯವೇ ಇರುತ್ತಿಲಿಲ್ಲ ಎಂದು ಹೇಳಿದ್ದಾರೆ.
ಫೇಕು ಎಂದು ಗೂಗಲ್ ಮಾಡಿದರೆ ಮೋದಿ ಚಿತ್ರ
ಇದೇ ವೇಳೆ ಪ್ರಧಾನಿ ಮೋದಿ ಅವರ ವಿರುದ್ಧವೂ ಕಿಡಾಕಿರದ ಅವರು, 'ಭಯೋತ್ಪಾದಕರು ನರಕದಲ್ಲಿ ಅಡಗಿಕೊಂಡಿದ್ದರೂ ಹುಡುಕಿ ಬೇಟೆಯಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶದಲ್ಲಿ ಪುಲ್ವಾಮಾ, ಪಠಾಣ್ ಕೋಟ್‌, ಉರಿ ದಾಳಿಗಳು ನಡೆದಾಗ ಪ್ರಧಾನಿ ಮೋದಿ ಎಲ್ಲಿಗೆ ಹೋಗಿದ್ದರು. ಈ ದಾಳಿಗಳನ್ನು ತಡೆಯಲು ನಮ್ಮಿಂದೇಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.
'ಧರ್ಮ ಅಪಾಯದಲ್ಲಿದೆ ಅದಕ್ಕಾಗಿ ಹಿಂದೂಗಳು ಒಂದಾಗಬೇಕು ಎಂದು ಬಿಜೆಪಿ ಅವರು ಹೇಳುತ್ತಾರೆ. ಈ ದೇಶ ಸುಮಾರು 500 ವರ್ಷಗಳ ಕಾಲ ಮುಸಲ್ಮಾನರ ಆಡಳಿತಕ್ಕೆ ಒಳಪಟ್ಟಿದೆ. ಆದರೆ ಯಾವುದೇ ಧರ್ಮಕ್ಕೂ ಹಾನಿ ಮಾಡಿಲ್ಲ ಎಂಬುದನ್ನುಅವರು ಅರಿಯಬೇಕು. ಅಂತೆಯೇ ಧರ್ಮವನ್ನು ಮಾರಾಟ ಮಾಡುವವರ ಬಗ್ಗೆಯೂ ಎಚ್ಚರದಿಂದಿರಿ. ನಮ್ಮ ಧರ್ಮದಲ್ಲಿ ನಾವು 'ಹರ ಹರ ಮಹದೇವ್‌' ಎನ್ನುತ್ತೇವೆ. ಆದರೆ, ಬಿಜೆಪಿ ಅವರು ‘ಹರ ಹರ ಮೋದಿ’ ಎನ್ನುವ ಮೂಲಕ ನಮ್ಮ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ್ದಾರೆ. ಗೂಗಲ್‌ ನಲ್ಲಿ ಫೇಕು ಎಂದು ಹುಡುಕಿದರೆ ಯಾರ ಫೋಟೋ ಕಾಣುತ್ತದೆ ಎಂಬುದು ನಮ್ಮೆಲ್ಲರಿಗೂ ಗೊತ್ತು' ಎಂದು ದಿಗ್ವಿಜಯ್ ಸಿಂಗ್ ಟೀಕಿಸಿದ್ದಾರೆ.
ಬಿಜೆಪಿ ನಾಯಕರಿಗೇ ಇಲ್ಲಿ ಸ್ಪರ್ಧಿಸಲು ಭಯ
ಭೋಪಾಲ್ ನಿಂದ ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಗೊತ್ತಾದ ಮೇಲೆ ಮಾಮ (ಪ್ರಧಾನಿ ಮೋದಿ)ಭಯಗೊಂಡಿದ್ದಾರೆ. ಉಮಾ ಭಾರತಿ ಸ್ಪರ್ಧಿಸಲು ನಿರಾಕರಿಸಿದರು. ಗೌರ್‌ (ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಬಾಬುಲಾಲ್‌ ಗೌರ್‌) ತಮ್ಮ ಆರೋಗ್ಯ ಸರಿ ಇಲ್ಲ ಎಂದು ಹೇಳಿ ನುಣುಚಿಕೊಂಡರು. ಹಾಗಾಗಿ ನಾಮಪತ್ರ ಸಲ್ಲಿಸಲು ಕೊನೆಯ ದಿನ ಇಲ್ಲಿಂದ ಸಾಧ್ವಿ ಕಣಕ್ಕಿಳಿಯುವುದಾಗಿ ಬಿಜೆಪಿ ಪ್ರಕಟಿಸಿತು ಎಂದು ಹರಿಹಾಯ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com