4ನೇ ಹಂತದ ಮತದಾನದ ವೇಳೆ 785 ಕೋಟಿ ನಗದು, 249 ಕೋಟಿ ಮೌಲ್ಯದ ಮದ್ಯ ವಶಕ್ಕೆ!

ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ನಿನ್ನೆ ನಡೆದ 4ನೇ ಹಂತದ ಮತದಾನದ ವೇಳೆ ಅಪಾರ ಪ್ರಮಾಣದ ನಗದು, ಮದ್ಯ ಮತ್ತು ಬೆಲೆ ಬಾಳುವ ವಸ್ತುಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ನಿನ್ನೆ ನಡೆದ 4ನೇ ಹಂತದ ಮತದಾನದ ವೇಳೆ ಅಪಾರ ಪ್ರಮಾಣದ ನಗದು, ಮದ್ಯ ಮತ್ತು ಬೆಲೆ ಬಾಳುವ ವಸ್ತುಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.
ನಿನ್ನೆ 9 ರಾಜ್ಯಗಳ ಸುಮಾರು 72 ಲೋಕಸಭಾ ಕ್ಷೇತ್ರಗಳಲ್ಲಿ 4ನೇ ಹಂತದ ಮತದಾನ ನಡೆದಿದ್ದು, ಈ ವೇಳೆ ಆಯೋಗ ನಡೆಸಿದ ಕಾರ್ಯಾಚರಣೆಯಲ್ಲಿ 785 ಕೋಟಿ ನಗದು, 249 ಕೋಟಿ ಮೌಲ್ಯದ ಮದ್ಯ ಮತ್ತು 972 ಕೋಟಿ ರೂ ಮೌಲ್ಯದ ಚಿನ್ನಾಭರಣ, 1214 ಕೋಟಿ ರೂ ಮೌಲ್ಯದ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಆಯೋಗದ ಒಟ್ಟು 97 ವೀಕ್ಷಕರು 72 ಲೋಕಭಾ ಕ್ಷೇತ್ರದಲ್ಲಿ, 42 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಾಚರಣೆ ನಡೆಸಿದರು, ಅಭ್ಯರ್ಥಿಗಳ ಖರ್ಚುವೆಚ್ಚಗಳ ಮೇಲೆ ಹದ್ದಿನ ಕಣ್ಣಿದ್ದ ವೀಕ್ಷಕರು ನಿನ್ನೆ ದೇಶಾದ್ಯಂತ 9 ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಅಪಾರ ಪ್ರಮಾಣದ ನಗದು, ಮದ್ಯ, ಚಿನ್ನಾಭರಣ, ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದೆ.
ಒಟ್ಟು 7 ಹಂತಗಳ ಚುನಾವಣೆ ಈ ಪೈಕಿ ಈಗಾಗಲೇ 4 ಹಂತಗಳು ಮುಕ್ತಾಯವಾಗಿದ್ದು, ನಾಲ್ಕನೇ ಹಂತದಲ್ಲಿ ಜಮ್ಮು ಕಾಶ್ಮೀರ, ಜಾರ್ಖಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಹಲವು ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com