
ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಹಾಗೂ ಬಿಜೆಪಿಯ ಹಲವು ನಾಯಕರು ಸ್ಪರ್ಧಿಸಲು ಬಯಸಿದ್ದ ಕೇರಳದ ಪಟ್ಟಣಂತಿಟ್ಟ ಲೋಕಸಭಾ ಕ್ಷೇತ್ರದ ಟಿಕೆಟ್ ಆರ್ ಎಸ್ ಎಸ್ ಹಿನ್ನೆಲೆಯ ಕೆ ಸುರೇಂದ್ರನ್ ಪಾಲಾಗಿದೆ.
ಬಿಜೆಪಿಯು ಶನಿವಾರ ಬಿಡುಗಡೆಗೊಳಿಸಿರುವ ಅಭ್ಯರ್ಥಿಗಳ ನೂತನ ಪಟ್ಟಿಯಲ್ಲಿ ಸುರೇಂದ್ರನ್ ಹೆಸರನ್ನು ಪ್ರಕಟಿಸಲಾಗಿದೆ.ಪ್ರಖ್ಯಾತ ಶಬರಿಮಲೆ ದೇವಾಲಯವಿರುವ ಕೇಂದ್ರ ಸ್ಥಳ ಪಟ್ಟಣಂತಿಟ್ಟದಿಂದ ಸ್ಪರ್ಧಿಸಲು ಇದೊಂದು ಉತ್ತಮ ಅವಕಾಶ ಎಂದು ಪಕ್ಷ ಪರಿಗಣಿಸಿದೆ.
ಕೇರಳ ಬಿಜೆಪಿ ಘಟಕದ ಅಧ್ಯಕ್ಷ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪರಮಾಪ್ತ ಪಿ.ಎಸ್. ಶ್ರೀಧರನ್ ಪಿಳ್ಳೈ ಕೂಡ ಪಟ್ಟಣಂತಿಟ್ಟ ಸ್ಪರ್ಧಾಕಾಂಕ್ಷಿಯಾಗಿದ್ದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ರಾಜಕೀಯ ವೃತ್ತಿ ಜೀವನ ಆರಂಭಿಸಿದ ಸುರೇಂದ್ರನ್, ಶಬರಿ ಮಲೆ ವಿವಾದದ ವೇಳೆ ಗುರುತಿಸಿಕೊಂಡಿದ್ದರು. 50 ವರ್ಷದೊಳಗಿನ, ಮಾಸಿಕ ಋತುಸ್ರಾವವಾಗುತ್ತಿರುವ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪನ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸದಂತೆ ನಡೆದ ಪ್ರತಿಭಟನೆಯಲ್ಲಿ ಬಂಧಿತರಾಗಿದ್ದರು.
Advertisement