ರಘುರಾಮ್ ರಾಜನ್ ಸೇರಿದಂತೆ ಹಲವು ಅರ್ಥಶಾಸ್ತ್ರಜ್ಞರು ಕನಿಷ್ಠ ಆದಾಯ ಯೋಜನೆ ಸಲಹೆ ನಿಡಿದ್ದರು: ರಾಹುಲ್ ಗಾಂಧಿ

ಬಡವರಿಗೆ ಕನಿಷ್ಟ ಆದಾಯದ ಖಾತರಿ ನೀಡುವ ತಮ್ಮ ಯೋಜನೆ ಬಡತನದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಎಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಕುರಿತು ಆರ್ ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್....
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ: ಬಡವರಿಗೆ ಕನಿಷ್ಟ ಆದಾಯದ ಖಾತರಿ ನೀಡುವ ತಮ್ಮ ಯೋಜನೆ ಬಡತನದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಎಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಕುರಿತು ಆರ್ ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಸಹ ಸಲಹೆ ನೀಡಿದ್ದರು ಎಂದಿದ್ದಾರೆ.
ಬಡ ಕುಟುಂಬಗಳ ಮಹಿಳೆಯರು ವರ್ಷಕ್ಕೆ 72,000 ರೂ.ಗಳನ್ನು ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ ಪಡೆಯುತ್ತಾರೆ ಎಂದು ಕಾಂಗ್ರೆಸ್ ಘೋಷಣೆ ಮಾಡಿದ್ದು ಬಿಜೆಪಿ ವಿನಾಕಾರಣ ಇದನ್ನು ವಿರೋಧಿಸುತ್ತಿದೆ ಎಂದಿದ್ದರು. 
ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ರ್ಸುರ್ಜೆವಾಲಾ ಅವರ ಪ್ರಕಾರ, ಈಗಾಗಲೇ ಈ ಯೋಜನೆಗಾಗಿ ಕಾಂಗ್ರೆಸ್ 3.6 ಲಕ್ಷ ಕೋಟಿ ರೂ ತೆಗೆದಿರಿಸಿದೆ.
ಸೋಮವಾರ ದೆಹಲಿಯ ಪತ್ರಿಕಾಗೋಷ್ಠಿಯಲ್ಲಿ ಗಾಂಧಿ ದೇಶದ ಶೇ.  20 ರಷ್ಟು ಬಡ ಕುಟುಂಬಗಳಿಗೆ ಅವರ ಪಕ್ಷವು 72,000 ರೂ. ವಾರ್ಷಿಕ ಹಣ ಪಾವತಿಸುವ ಯೋಜನೆಯನ್ನು ಪ್ರಕಟಿಸಿದ್ದರು.  ಅಲ್ಲದೆ ಇದು ಪಕ್ಷದ ಬಲವೃದ್ದಿಗಾಗಿ, ಅಧಿಕಾರ ಪಡೆಯುವದಲ್ಕ್ಕಾಗಿ ಮಾಡುವುದಲ್ಲ ಹ್ಬಡವರ ಪರ ನೈಜ ಕಾಳಜಿಯಿಂದ ಈ ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದ್ದರು. ಆದರೆ ಬಿಜೆಪಿಯ ಅರುಣ್ ಜೇಟ್ಲಿ ಸೇರಿ ಅನೇಕ ಮುಖಂಡರು ಕಾಂಗ್ರೆಸ್ ನ ಈ ಯೋಜನೆಯನ್ನು ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com