ಮಮತಾ ಬ್ಯಾನರ್ಜಿ
ದೇಶ
'ಫೊನಿ' ಚಂಡಮಾರುತ ಎಫೆಕ್ಟ್: ಎರಡು ದಿನ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ ರದ್ದು
ಫೊನಿ ಚಂಡಮಾರುತ ಇಂದು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸುವ ಸಾಧ್ಯತೆ ಇದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎರಡು ದಿನಗಳ ಚುನಾವಣಾ ಪ್ರಚಾರವನ್ನು ರದ್ದುಗೊಳಿಸಿದ್ದಾರೆ.
ಕೋಲ್ಕತ್ತಾ: ಫೊನಿ ಚಂಡಮಾರುತ ಇಂದು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸುವ ಸಾಧ್ಯತೆ ಇದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎರಡು ದಿನಗಳ ಚುನಾವಣಾ ಪ್ರಚಾರವನ್ನು ರದ್ದುಗೊಳಿಸಿದ್ದಾರೆ.
ಮಮತಾ ಬ್ಯಾನರ್ಜಿ ಕರಾವಳಿ ತೀರ ಪ್ರದೇಶ ಖಾರಗ್ ಪುರದಲ್ಲಿದ್ದು, ಅವರೇ ಖುದ್ಧಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಬರೊಬ್ಬರಿ ಪ್ರತೀ ಗಂಟೆಗೆ 175 ಕಿ.ಮೀ ವೇಗದಲ್ಲಿ ಫೊನಿ ಚಂಡಮಾರುತ ಒಡಿಶಾದ ಪುರಿ ಕಡಲ ತೀರಕ್ಕೆ ಅಪ್ಪಳಿಸಿದ್ದು, ಅಲ್ಲಲ್ಲಿ ಭೂ ಕುಸಿತ, ಮರಗಳು ಧರೆಗುರುಳಿ ಬಿದ್ದಿರುವ ಬಗ್ಗೆ ವರದಿಯಾಗಿದೆ

