ಮೋದಿ 180 ಡಿಗ್ರಿ ಪ್ರಧಾನಿ, ಅವರು ಹೇಳುವುದು ಒಂದು, ಮಾಡುವುದು ಇನ್ನೊಂದು: ಅಖಿಲೇಶ್ ಯಾದವ್

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸೋಲಲಿದ್ದು, ಎಸ್ಪಿ,ಬಿಎಸ್ಪಿ ಮತ್ತು ಆರ್ ಎಲ್ ...
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್
ಲಕ್ನೊ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸೋಲಲಿದ್ದು, ಎಸ್ಪಿ,ಬಿಎಸ್ಪಿ ಮತ್ತು ಆರ್ ಎಲ್ ಡಿಯಲ್ಲಿ ಸರ್ಕಾರ ರಚಿಸಿ ಪ್ರಧಾನಿ ಯಾರಾಗುತ್ತಾರೆಂದು ತೀರ್ಮಾನಿಸಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.
ಇಂದು ಲಕ್ನೊದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,  ಇದುವರೆಗಿನ ಹಂತಗಳ ಮತದಾನದಲ್ಲಿ ಬಿಜೆಪಿ ಹಿಂದೆ ಬಿದ್ದಿದೆ ಎಂದು ಗೊತ್ತಾದ ಬಳಿಕ ಪ್ರಧಾನ ಮಂತ್ರಿಯವರ ಭಾಷೆಯೇ ಬದಲಾಗಿದೆ. ಬಿಜೆಪಿಗೆ ಇಂದು ಬೇರೆ ಮಾರ್ಗವೇ ಇಲ್ಲದಾಗಿದೆ. ಪ್ರಧಾನಿಯಿಂದ ಹಿಡಿದ ಬಿಜೆಪಿಯ ಯಾವುದೇ ನಾಯಕರು ದೇಶದ ಅಭಿವೃದ್ಧಿ, ರೈತರ ಆದಾಯಗಳ ಬಗ್ಗೆ ಮಾತನಾಡುವುದಿಲ್ಲ. ಮೋದಿಯವರು ದೇಶದ ಜನರನ್ನು ಹಾದಿ ತಪ್ಪಿಸಲು ಬಯಸುತ್ತಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ ಸೋಲಲಿದ್ದು ಪ್ರಧಾನಿ ಯಾರಾಗುತ್ತಾರೆಂದು ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ಆರ್ ಎಲ್ ಡಿ ತೀರ್ಮಾನಿಸಲಿದೆ ಎಂದರು.
ಮೋದಿಯವರು 180 ಡಿಗ್ರಿ ಪ್ರಧಾನಿ. ಅವರು ಏನು ಹೇಳುತ್ತಾರೆಯೋ ಅದಕ್ಕೆ ಸರಿ ವಿರುದ್ಧವಾಗಿ ಮಾಡುತ್ತಾರೆ. ಕೇಲವ 1 ಶೇಕಡಾ ಜನಸಂಖ್ಯೆಗೆ ಮಾತ್ರ ಅವರು ಪ್ರಧಾನ ಮಂತ್ರಿ. ಸಾಮಾಜಿಕ ನ್ಯಾಯದ ಕಡೆಗೆ ದೇಶವನ್ನು ಕೊಂಡೊಯ್ಯುವವರ ಬಗ್ಗೆ ಮೋದಿ ತಲೆಕೆಡಿಸಿಕೊಂಡಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com