ಐಎಎಫ್ ಜೆಟ್ ಗಳನ್ನು 744 ರೂಗಳಿಗೆ ಖಾಸಗಿ ಟ್ಯಾಕ್ಸಿಯನ್ನಾಗಿ ಮಾಡಿದ್ದು ಮೋದಿ: ಕಾಂಗ್ರೆಸ್
ರಾಜೀವ್ ಗಾಂಧಿ ಐಎನ್ಎಸ್ ವಿರಾಟ್ ನ್ನು ಕುಟುಂಬ ಪ್ರವಾಸಕ್ಕಾಗಿ ಖಾಸಗಿ ಟ್ಯಾಕ್ಸಿಯ ರೀತಿಯಲ್ಲಿ ಬಳಸಿಕೊಂಡಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಐಎಎಫ್ ಜೆಟ್ ಗಳನ್ನು 744 ರೂಗಳಿಗೆ ಖಾಸಗಿ ಟ್ಯಾಕ್ಸಿಯನ್ನಾಗಿ ಮಾಡಿದ್ದು ಮೋದಿ: ಕಾಂಗ್ರೆಸ್
ನವದೆಹಲಿ: ರಾಜೀವ್ ಗಾಂಧಿ ಐಎನ್ಎಸ್ ವಿರಾಟ್ ನ್ನು ಕುಟುಂಬ ಪ್ರವಾಸಕ್ಕಾಗಿ ಖಾಸಗಿ ಟ್ಯಾಕ್ಸಿಯ ರೀತಿಯಲ್ಲಿ ಬಳಸಿಕೊಂಡಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಸರಣಿ ಸುಳ್ಳುಗಾರ, ಭಾರತೀಯ ವಾಯುಪಡೆಯ ವಿಮಾನಗಳನ್ನು ತಮ್ಮ ಸ್ವಂತದ ಟ್ಯಾಕ್ಸಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನ ವಕ್ತಾರ ಪವನ್ ಖೇರ ಆರೋಪಿಸಿದ್ದಾರೆ.
ರಾಜೀವ್ ಗಾಂಧಿ ವಿರುದ್ಧ ಮೋದಿ ಮಾಡಿರುವ ಆರೋಪ ಸುಳ್ಳು ಎಂಬುದಕ್ಕೆ ಭಾರತೀಯ ವಾಯುಪಡೆಯ ನಿವೃತ್ತ ಉಪ ಅಡ್ಮಿರಲ್ ವಿನೋದ್ ಪಸ್ರಿಚ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಕಾಂಗ್ರೆಸ್, ರಾಜೀವ್ ಗಾಂಧಿ ಕೆಲಸದ ನಿಮಿತ್ತ ಐಎನ್ಎಸ್ ವಿರಾಟ್ ನ್ನು ಬಳಸಿದ್ದರೇ ಹೊರತು ಪ್ರವಾಸಕ್ಕಾಗಿ ಅಲ್ಲ ಎಂದು ಹೇಳಿದೆ.
ಸತ್ಯ ಮೋದಿಗೆ ಬೇಕಿಲ್ಲ. ಮೋದಿಗೆ ತಮ್ಮ ಸಾಧನೆಗಳ ಬಗ್ಗೆ ಮಾತನಾಡುವುದಕ್ಕೆ ಏನೂ ಇಲ್ಲ. ರಾಹುಲ್ ಗಾಂಧಿ ಮೋದಿ ಅವರನ್ನು ಕಳೆದ 6 ತಿಂಗಳಿನಿಂದ ಚರ್ಚೆಗೆ ಆಹ್ವಾನಿಸುತ್ತಿದ್ದಾರೆ. ಆದರೆ ಮೋದಿಗೆ ಈ ಬಗ್ಗೆ ಮಾತನಾಡುವುದಕ್ಕೆ ಧೈರ್ಯವೇ ಇಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ನೀವು ಭಾರತೀಯ ವಾಯುಪಡೆ ವಿಮಾನಗಳನ್ನು ನಿಮ್ಮದೇ ಟ್ಯಾಕ್ಸಿಯಂತೆ ಬಳಸಿಕೊಂಡಿದ್ದೀರ, 744 ರೂಪಾಯಿಗಳಿಗೆ ವಾಯುಪಡೆ ವಿಮಾನಗಳನ್ನು ಚುನಾವಣಾ ಓಡಾಟಕ್ಕೆ ಬಳಸಿದ್ದೀರ ಎಂದು ಕಾಂಗ್ರೆಸ್ ನ ಮತ್ತೋರ್ವ ವಕ್ತಾರ ರಣ್ದೀಪ್ ಸುರ್ಜೆವಾಲ ಟ್ವೀಟ್ ಮಾಡಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.