ಕುಶಿನಗರ್(ಉತ್ತರ ಪ್ರದೇಶ): ತಾವು ಹಿಂದುಳಿದ ಜಾತಿಯಲ್ಲಿ ಹುಟ್ಟಿದರೂ ಕೂಡ ಅಂತಹ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಉತ್ತರ ಪ್ರದೇಶದ ಕುಶಿನಗರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಇಂದು ಮಾತನಾಡಿದ ಅವರು, ಬಡತನ ನನ್ನ ಜಾತಿ. ನನ್ನಲ್ಲಿ ಇರುವುದು ಒಂದೇ ಜಾತಿ, ಅದು ಬಡವರು, ನಾನು ಬಡತನ ನೋಡಿದ್ದೇನೆ, ಅದರ ನೋವು ಏನೆಂದು ನನಗೆ ಗೊತ್ತು, ಬಡತನವನ್ನು ಹೋಗಲಾಡಿಸಲು ನಿರಂತರ ಹೋರಾಡುತ್ತೇನೆ ಎಂದರು.
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಸೇರಿದಂತೆ ವಿರೋಧಪಕ್ಷದವರು ಮೋದಿಯವರ ಜಾತಿಯ ವಿಚಾರವಾಗಿ ಆರೋಪ ಮಾಡುತ್ತಾ ಬಂದಿದ್ದರು. ಮೋದಿಯೊಬ್ಬ ನಕಲಿ ದಲಿತ ನಾಯಕ, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಚುನಾವಣಾ ಲಾಭಕ್ಕಾಗಿ ತಮ್ಮ ಜಾತಿಯನ್ನು ಹಿಂದುಳಿದ ವರ್ಗಗಗಳಲ್ಲಿ ಸೇರಿಸಿದ್ದರು ಎಂದು ಮಾಯಾವತಿ ವಾಗ್ದಾಳಿ ನಡೆಸಿದ್ದರು,
पीएम श्री मोदी ने अब लोगों को वरगलाने के लिए कल से एक नया चुनावी शिगुफा छोड़ा है कि उनकी जाति वही है जो गरीब की जाति है। चुनावी स्वार्थ हेतु श्री मोदी न जाने क्या-क्या छल करेंगे लेकिन 5 साल तक करोड़ों गरीबों, मजदूरों, किसानों आदि की दुर्दशा के लिए जनता उन्हें कैसे माफ कर सकती है?