ಲೋಕಸಭಾ ಚುನಾವಣೆ 2019: 6ನೇ ಹಂತದ ಮತದಾನ, ಮಧ್ಯಾಹ್ನ 1 ಗಂಟೆ ವೇಳೆಗೆ 30.76ರಷ್ಟು ಮತದಾನ

ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ಇಂದು ನಡೆಯುತ್ತಿರುವ 6ನೇ ಹಂತದ ಮತದಾನ ಬಿರುಸಿನಿಂದ ಸಾಗಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ 30.76ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
6ನೇ ಹಂತದ ಮತದಾನ
6ನೇ ಹಂತದ ಮತದಾನ
ನವದೆಹಲಿ: ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ಇಂದು ನಡೆಯುತ್ತಿರುವ 6ನೇ ಹಂತದ ಮತದಾನ ಬಿರುಸಿನಿಂದ ಸಾಗಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ 30.76ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
ದೇಶದ ಏಳು ರಾಜ್ಯಗಳ ಒಟ್ಟು 59 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಉತ್ತರ ಪ್ರದೇಶದಲ್ಲಿನ 14 ಕ್ಷೇತ್ರ, ಹರಿಯಾಣದ 10 ಕ್ಷೇತ್ರ, ಪಶ್ಚಿಮ ಬಂಗಾಳ, ಬಿಹಾರ, ಮಧ್ಯ ಪ್ರದೇಶದ ತಲಾ 8 ಕ್ಷೇತ್ರ, ದೆಹಲಿಯ 7ಕ್ಷೇತ್ರ, ಮತ್ತು ಜಾರ್ಖಂಡ್‌ ನ 4 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಮಧ್ಯಾಹ್ನ 1 ಗಂಟೆಯ ವೇಳೆಗೆ 30.76ರಷ್ಟು ಮತದಾನವಾಗಿದ್ದು, ಈ ಪೈಕಿ ಬಿಹಾರದಲ್ಲಿ ಶೇ.23.03ರಷ್ಟು, ಹರ್ಯಾಣದಲ್ಲಿ ಶೇ,31.53ರಷ್ಟು, ಮಧ್ಯ ಪ್ರದೇಶದಲ್ಲಿ ಶೇ.34.27ರಷ್ಟು. ಉತ್ತರ ಪ್ರದೇಶದಲ್ಲಿ ಶೇ. 29.36ರಷ್ಟು, ಪಶ್ಚಿಮ ಬಂಗಾಳದಲ್ಲಿ 41.14ರಷ್ಟು ಮತ್ತು ಜಾರ್ಖಂಡ್ ನಲ್ಲಿ 43.67ರಷ್ಟು ಮತದಾನವಾಗಿದೆ.
ಇನ್ನು ಕೇಂದ್ರ ಉತ್ತರ ದೆಹಲಿಯಲ್ಲಿ ಶೇ. 20.51ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com