ಬೇಕಾದರೆ ಸಾಯುತ್ತೇನೆ, ಆದರೆ ಮೋದಿಯವರ ಪೋಷಕರನ್ನು, ವಂಶದವರನ್ನು ಅವಮಾನಿಸುವುದಿಲ್ಲ: ರಾಹುಲ್ ಗಾಂಧಿ

ತಮ್ಮ ತಂದೆ ದಿವಂಗತ ಮಾಜಿ ಪ್ರಧಾನಿ ರಾಹುಲ್ ಗಾಂಧಿ, ಅಜ್ಜಿ ಇಂದಿರಾ ಗಾಂಧಿ ಮತ್ತು ಮುತ್ತಜ್ಜ ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on
ಭೋಪಾಲ್: ತಮ್ಮ ತಂದೆ ದಿವಂಗತ ಮಾಜಿ ಪ್ರಧಾನಿ ರಾಹುಲ್ ಗಾಂಧಿ, ಅಜ್ಜಿ ಇಂದಿರಾ ಗಾಂಧಿ ಮತ್ತು ಮುತ್ತಜ್ಜ ಪಂಡಿತ್ ಜವಹರಲಾಲ್ ನೆಹರೂ ಅವರನ್ನು ಹಲವು ಬಾರಿ ಅವಮಾನಿಸಿದ್ದರೂ ಕೂಡ ನಾನು ಮಾತ್ರ ನರೇಂದ್ರ ಮೋದಿಯವರ ತಂದೆ-ತಾಯಿ ಮತ್ತು ಅವರ ಕುಟುಂಬದವರನ್ನು ಯಾವತ್ತೂ ಅವಮಾನಿಸುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮಧ್ಯ ಪ್ರದೇಶದ ಉಜ್ಜೈನ್, ನೀಮುಚ್ ಮತ್ತು ಖಾಂಡ್ವ ಕ್ಷೇತ್ರಗಳಲ್ಲಿ ಚುನಾವಣಾ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ದ್ವೇಷದ ಮಾತುಗಳನ್ನಾಡುತ್ತಾರೆ. ನನ್ನ ತಂದೆ, ಅಜ್ಜಿ, ಮುತ್ತಜ್ಜ ಎಲ್ಲರನ್ನು ಅವಮಾನಿಸಿದರು. ನಾನು ಸಾಯುತ್ತೇನೆ ಬೇಕಾದರೆ, ಆದರೆ ಮೋದಿಯವರ ಪೋಷಕರನ್ನಾಗಲಿ, ಕುಟುಂಬದವರನ್ನಾಗಲಿ ಅವಮಾನಿಸುವುದಿಲ್ಲ. ಯಾಕೆಂದರೆ ನಾನು ಆರ್ ಎಸ್ಎಸ್ ಗೆ ಅಥವಾ ಬಿಜೆಪಿಗೆ ಸೇರಿದವನಲ್ಲ.ನಾನು ಕಾಂಗ್ರೆಸ್ ನವನು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com