ಫಲಿತಾಂಶಕ್ಕಾಗಿ ಆ್ಯಪ್ ಬಿಡುಗಡೆ, ಇವಿಎಂಗೆ ಸಂಬಂಧಿಸಿದ ದೂರುಗಳ ನಿರ್ವಹಣೆಗೆ ನಿಯಂತ್ರಣ ಕೊಠಡಿ!

ಲೋಕಸಭಾ ಚುನಾವಣೆಯ ಫಲಿತಾಂಶದ ಕುತೂಹಲಕ್ಕೆ ನಾಳೆ ತೆರೆ ಬೀಳಲಿದ್ದು, ಪ್ರಜೆಗಳಿಗೆ ತತ್ ಕ್ಷಣದ ಫಲಿತಾಂಶದ ಮಾಹಿತಿ ನೀಡಲು ಚುನಾವಣಾ ಆಯೋಗ ನೂತನ ಆ್ಯಪ್ ಬಿಡುಗಡೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶದ ಕುತೂಹಲಕ್ಕೆ ನಾಳೆ ತೆರೆ ಬೀಳಲಿದ್ದು, ಪ್ರಜೆಗಳಿಗೆ ತತ್ ಕ್ಷಣದ ಫಲಿತಾಂಶದ ಮಾಹಿತಿ ನೀಡಲು ಚುನಾವಣಾ ಆಯೋಗ ನೂತನ ಆ್ಯಪ್ ಬಿಡುಗಡೆ ಮಾಡಿದೆ.
ಈ ಹಿಂದೆ ಮತದಾನ ಪ್ರಕ್ರಿಯೆಯ ಮಾಹಿತಿ ಪಡೆಯಲು ವೋಟರ್ ಟರ್ನೌಟ್ ಆ್ಯಪ್ ಬಿಡುಗಡೆ ಮಾಡಿದ್ದ ಚುನಾವಣಾ ಆಯೋಗ ಆದೇ ಮಾದರಿಯಲ್ಲಿ ನಾಳಿನ ಫಲಿತಾಂಶ ಪ್ರಕಟಣೆ ಸಂಬಂಧ ಮಾಹಿತಿಗಾಗಿ ನೂತನ ಆ್ಯಪ್ ಬಿಡುಗಡೆ ಮಾಡಿದೆ. ಆ್ಯಪ್ ನ ಮೂಲಕ ಪ್ರಜೆಗಳು ಫಲಿತಾಂಶದ ರಿಯಲ್ ಟೈಮ್ ಟ್ರೆಂಡ್ ಮತ್ತು ಇತರೆ ಮಾಹಿತಿಗಳನ್ನು ಪಡೆಯಬಹುದಾಗಿದೆ. ಆ ಆ್ಯಪ್ ಆಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿಗಳಲ್ಲಿ ಲಭ್ಯವಿದ್ದು, ಚುನಾವಣಾ ಆಯೋಗ ವೆಬ್ ಸೈಟಿನಲ್ಲಿ ಈ ಆ್ಯಪ್ ನ ಕುರಿತ ಡೌನ್ಲೋಡ್ ಲಿಂಕ್ ದೊರೆಯಲಿದೆ ಎಂದು ಆಯೋಗ ತಿಳಿಸಿದೆ.
ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಮತಎಣಿಕೆ ಕಾರ್ಯದ ಸಂಪೂರ್ಣ ಮಾಹಿತಿ ಆ್ಯಪ್ ನಲ್ಲಿ ಲಭ್ಯವಾಗಲಿದೆ. ಈ ಆ್ಯಪ್ ನಲ್ಲಿ ಸಾಕಷ್ಟು ಫೀಚರ್ ಗಳಿದ್ದು, ತತ್ ಕ್ಷಣದ ಫಲಿತಾಂಶ ಮಾತ್ರವಲ್ಲದೇ ಜನರು ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ಬುಕ್ ಮಾರ್ಕ್ಸ್ ಗೆ ಸೇರಿಸುವ ಮೂಲಕ ಆ ಅಭ್ಯರ್ಥಿಯ ಕುರಿತಾದ ಫಿಲಿತಾಂಶಗಳನ್ನು ಸೆಕೆಂಡ್ ಗಳಲ್ಲಿ ಪಡೆಯಹುದಾಗಿದೆ. ಅಂತೆಯೇ ಜಿಲ್ಲಾವಾರು, ರಾಜ್ಯಾವಾರು ಫಲಿತಾಂಶಗಳನ್ನೂ ಕೂಡ ಆ್ಯಪ್ ನಲ್ಲಿನ ಫಿಲ್ಟರ್ ಆಯ್ಕೆಯ ಮೂಲಕ ಪಡೆಯಬಹುದಾಗಿದೆ. ಅಂತೆಯೇ ಫಿಲ್ಟರ್ ಆಯ್ಕೆಯ ಮೂಲಕ ಬಳಕೆದಾರರು ಗೆದ್ದ ಅಭ್ಯರ್ಥಿಗಳ, ಮುನ್ನಡೆ, ಹಿನ್ನಡೆ ಸಾಧಿಸಿರುವ ಅಭ್ಯರ್ಥಿಗಳ ಮಾಹಿತಿ ಕೂಡ ಪಡೆಯಬಹುದಾಗಿದೆ.
ಇವಿಎಂಗೆ ಸಂಬಂಧಿಸಿದ ದೂರುಗಳ ನಿರ್ವಹಣೆಗೆ ನಿಯಂತ್ರಣ ಕೊಠಡಿ
ಇದೇ ವೇಳೆ ಇವಿಎಂಗೆ ಸಂಬಂಧಿಸಿದ ದೂರುಗಳ ನಿರ್ವಹಣೆಗೂ ಆಯೋಗ ಕ್ರಮ ಕೈಗೊಂಡಿದ್ದು, ಫಲಿತಾಂಶ ದಿನ 24 ಗಂಟೆ ಇವಿಎಂಗೆ ಸಂಬಂಧಿಸಿದ ದೂರುಗಳ ನಿರ್ವಹಣೆಗೆ ನಿಯಂತ್ರಣ ಕೊಠಡಿ ತೆರೆಯುವ ವ್ಯವಸ್ಥೆ ಮಾಡಿಕೊಂಡಿದೆ. ಮೂಲಗಳ ಪ್ರಕಾರ ಸ್ಟ್ರಾಂಗ್​ ರೂಂನ ಸಂಗ್ರಹಣೆಯಲ್ಲಿನ ದೂರು, ಭದ್ರತಾ ಸಮಸ್ಯೆ, ಅಭ್ಯರ್ಥಿಗಳಿಂದ ನೇಮಕಗೊಂಡ ಏಜೆಂಟ್ ಗಳು ಸ್ಟ್ರಾಂಗ್​ ರೂಮ್​ ಪ್ರವೇಶ, ಸಿಸಿಟಿವಿ ನಿರ್ವಹಣೆ, ಇವಿಎಂಗಳ ಪ್ರತಿ ಚಲನೆ, ಎಣಕೆ ಸಮಯದಲ್ಲಿ ಕೇಳಿಬರುವ ಯಾವುದೇ ದೂರುಗಳನ್ನು ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಜೊತೆಗೆ ನಿಯಂತ್ರಣ ಕೊಠಡಿಯ ಸಂಪರ್ಕ ಸಂಖ್ಯೆಯನ್ನು ಕೂಡ ಪ್ರಕಟಿಸಿದೆ.
011-23052123 ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಇವಿಎಂಗಳ ಕುರಿತ ಯಾವುದೇ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com