ಚಂದ್ರಾಣಿ ಮುರ್ಮು
ಚಂದ್ರಾಣಿ ಮುರ್ಮು

ಒಡಿಶಾದ ಚಂದ್ರಾಣಿ ಮುರ್ಮು ಲೋಕಸಭೆಗೆ ಆಯ್ಕೆಯಾದ ಅತ್ಯಂತ ಕಿರಿಯ ಸಂಸದೆ

17ನೇ ಲೋಕಸಭೆಗೆ ಆಯ್ಕೆಯಾದ ಒಡಿಶಾದ 25 ವರ್ಷದ ಮೆಕ್ಯಾನಿಕಲ್ ಎಂಜಿನಿಯರ್ ಚಂದ್ರಾಣಿ ಮುರ್ಮು ಅವರು ಅತ್ಯಂತ ಕಿರಿಯ ಸಂಸದೆ...
ಭುವನೇಶ್ವರ: 17ನೇ ಲೋಕಸಭೆಗೆ ಆಯ್ಕೆಯಾದ ಒಡಿಶಾದ 25 ವರ್ಷದ ಮೆಕ್ಯಾನಿಕಲ್ ಎಂಜಿನಿಯರ್ ಚಂದ್ರಾಣಿ ಮುರ್ಮು ಅವರು ಅತ್ಯಂತ ಕಿರಿಯ ಸಂಸದೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 
ಒಡಿಶಾದ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ ಕ್ಯೊಂಜಾರ್‌ನಿಂದ ಬಿಜೆಡಿಯ ಸಂಸದೆಯಾಗಿ ಆಯ್ಕೆಯಾಗಿರುವ ಚಂದ್ರಾಣಿ ಅವರು, ಎರಡು ಬಾರಿಯ ಸಂಸದರಾಗಿದ್ದ ಬಿಜೆಪಿಯ ಅನಂತ ನಾಯಕ್‌ ವಿರುದ್ಧ 66, 203 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ 16ನೇ ಲೋಕಸಭೆಯಲ್ಲಿ ಅತ್ಯಂತ ಕಿರಿಯ ಸಂಸದರಾಗಿದ್ದ 26 ವರ್ಷದ ದುಶ್ಯಂತ್ ಅವರ ದಾಖಲೆಯನ್ನು ಮುರಿದಿದ್ದಾರೆ.
ನಾನು ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಕೆಲಸದ ಹುಡುಕಾಟದಲ್ಲಿದ್ದೆ. ಆದರೆ ಅನಿರೀಕ್ಷಿತವಾಗಿ ಬಿಜೆಡಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿತ್ತು. ಇದಕ್ಕಾಗಿ ನಾನು ಬಿಜೆಡಿ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಎರಡು ಬಾರಿ ಕಾಂಗ್ರೆಸ್ ಸಂಸದ ಹರಿಹರ್ ಸೋರೆನ್ ಅವರ ಮೊಮ್ಮಗಳಾದ  ಚಂದ್ರಾಣಿ ತಿಳಿಸಿದ್ದಾರೆ.
ಈ ಬಾರಿ ಶೇ.33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನೀಡುವುದಾಗಿ ಘೋಷಿಸಿದ್ದ ಬಿಜೆಡಿ, ಸಾರ್ವಜನಿಕ ಜೀವನ ಪ್ರವೇಶಿಸಲು ಬಯಸುವ ವಿದ್ಯಾವಂತ ಅಭ್ಯರ್ಥಿಯ ಹುಡುಕಾಟದಲ್ಲಿತ್ತು. ಈ ಅವಕಾಶವನ್ನು ಚಂದ್ರಾಣಿ ಮುರ್ಮು ಬಳಸಿಕೊಂಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com