ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ: ಕೇರಳ ಬಿಜೆಪಿ ಅಧ್ಯಕ್ಷ ಪಿಳ್ಳೈ ವಿರುದ್ಧ ಕೇಸ್ ದಾಖಲು

'ಬಟ್ಟೆ ತೆಗೆದು ಹಾಕಿದರೆ' ಮುಸ್ಲಿಮರನ್ನು ಗುರುತಿಸಬಹುದು ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದ ಕೇರಳ ಬಿಜೆಪಿ ಅಧ್ಯಕ್ಷ ಪಿ.ಎಸ್‌.ಶ್ರೀಧರನ್‌ ಪಿಳ್ಳೈ ಅವರ...
ಪಿಎಸ್ ಶ್ರೀಧರನ್ ಪಿಳ್ಳೈ
ಪಿಎಸ್ ಶ್ರೀಧರನ್ ಪಿಳ್ಳೈ
ಕೊಚ್ಚಿ: 'ಬಟ್ಟೆ ತೆಗೆದು ಹಾಕಿದರೆ' ಮುಸ್ಲಿಮರನ್ನು ಗುರುತಿಸಬಹುದು ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದ ಕೇರಳ ಬಿಜೆಪಿ ಅಧ್ಯಕ್ಷ ಪಿ.ಎಸ್‌.ಶ್ರೀಧರನ್‌ ಪಿಳ್ಳೈ ಅವರ ವಿರುದ್ಧ ಕೇರಳ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಕಳೆದ ಭಾನುವಾರ ಆತಿಂಗಾಲ್ ಲೋಕಸಭಾ ಕ್ಷೇತ್ರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಪಿಳ್ಳೈ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೇರಳ ಮುಖ್ಯ ಚುನಾವಣಾ ಅಧಿಕಾರಿ ಶಿಫಾರಸು ಮಾಡಿದ ನಂತರ ಪೊಲೀಸರು ಬಿಜೆಪಿ ನಾಯಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ ಮೇಲೆ ನಡೆಸಿದ ವೈಮಾನಿಕ ದಾಳಿಯನ್ನು ಪ್ರಸ್ತಾಪಿಸಿದ್ದ ಪಿಳ್ಳೈ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಯೋಧರ ಬಗ್ಗೆ ಇಲ್ಲದ ಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ಅಲ್ಲಿಯೂ ಜಾತಿ, ಧರ್ಮ ಹುಡುಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಅಲ್ಲದೆ ಒಂದು ವೇಳೆ ಅವರು ಇಸ್ಲಾಂ ಧರ್ಮದವರಾಗಿದ್ದರೆ ಕೆಲವು ಗುರುತುಗಳ ಮೂಲಕ ಅವರ ಧರ್ಮ ತಿಳಿದುಕೊಳ್ಳಬಹುದು. ಅವರ ಬಟ್ಟೆ ತೆಗೆದರೆ ಗುರುತಿಸುವುದು ಸುಲಭ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com