ನಕಲಿ ವೋಟ್ ಮಾಡುವಂತೆ ಬೆಂಬಲಿಗರಿಗೆ ಬಿಜೆಪಿ ಅಭ್ಯರ್ಥಿ ಕರೆ, ವಿಡಿಯೋ ವೈರಲ್

ಮತದಾರರು ಇಲ್ಲದಿದ್ದರೆ ನೀವೇ ನಕಲಿ ವೋಟ್ ಮಾಡಿ ಎಂದು ಉತ್ತರ ಪ್ರದೇಶದ ಬಡೌನ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗಮಿತ್ರ ಮೌರ್ಯ ಅವರು...

Published: 20th April 2019 12:00 PM  |   Last Updated: 20th April 2019 08:25 AM   |  A+A-


BJP's Badaun candidate asks supporters to indulge in fake voting

ಸಂಗಮಿತ್ರ ಮೌರ್ಯ

Posted By : LSB LSB
Source : PTI
ಬಡೌನ್: ಮತದಾರರು ಇಲ್ಲದಿದ್ದರೆ ನೀವೇ ನಕಲಿ ವೋಟ್ ಮಾಡಿ ಎಂದು ಉತ್ತರ ಪ್ರದೇಶದ ಬಡೌನ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗಮಿತ್ರ ಮೌರ್ಯ ಅವರು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿಯ ಈ ವಿವಾದಾತ್ಮಕ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಮತದಾನದ ದಿನ ಮತದಾರರು ಸ್ಥಳದಲ್ಲಿ ಇಲ್ಲದಿದ್ದರೆ ನಕಲಿ ವೋಟ್ ಮಾಡಬೇಕು ಎಂದು ಹೇಳಿದ್ದಾರೆ.

ಒಂದೇ ಒಂದು ಮತ ಸಹ ವ್ಯರ್ಥವಾಗಬಾರದು. ಯಾರಾದರೂ ಮತದಾನಕ್ಕೆ ಗೈರು ಆದರೆ ಅವರ ಮತವನ್ನು ನೀವೇ ಹಾಕಿ. ನಕಲಿ ಮತದಾನ ಸಾಮಾನ್ಯವಾಗಿ ಎಲ್ಲಾ ಕಡೆ ನಡೆಯುತ್ತದೆ. ನಿಮಗೆ ಅವಕಾಶ ಸಿಕ್ಕರೆ ಪರಿಸ್ಥಿತಿಯ ಲಾಭ ಪಡೆದುಕೊಳ್ಳಿ ಎಂದು ಮೌರ್ಯ ಸಲಹೆ ನೀಡುತ್ತಾರೆ. ಬಿಜೆಪಿ ಅಭ್ಯರ್ಥಿಯ ಈ ಮಾತಿಗೆ ಕಾರ್ಯಕರ್ತರು ಚಪ್ಪಾಳೆ ತಟ್ಟುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
Stay up to date on all the latest ದೇಶ news with The Kannadaprabha App. Download now
facebook twitter whatsapp