'ಚೌಕಿದಾರ್ ಛೋರ್ ಹೈ' ಘೋಷಣೆ ಕಾಂಗ್ರೆಸ್ ಭವಿಷ್ಯದಲ್ಲೂ ಮುಂದುವರಿಸಲಿದೆ; ವಕ್ತಾರ ಸಿಂಘ್ವಿ ಸ್ಪಷ್ಟನೆ

ಕಾಂಗ್ರೆಸ್ ಪಕ್ಷದ “ಚೌಕಿದಾರ್ ಛೋರ್ ಹೈ” ರಾಜಕೀಯ ಪ್ರಚಾರ ಘೋಷಣೆಯನ್ನು ಸುಪ್ರೀಂ ಕೋರ್ಟ್ ಅನುಮೋದಿಸಿದೆ ಎಂದು ಪಕ್ಷದ ನಾಯಕರು ಎಲ್ಲಿಯೂ ಹೇಳಿಲ್ಲ.
ಅಭಿಷೇಕ್ ಮನುಸಿಂಘ್ವಿ
ಅಭಿಷೇಕ್ ಮನುಸಿಂಘ್ವಿ
ನವದೆಹಲಿ: ಕಾಂಗ್ರೆಸ್ ಪಕ್ಷದ  “ಚೌಕಿದಾರ್ ಛೋರ್ ಹೈ”  ರಾಜಕೀಯ ಪ್ರಚಾರ ಘೋಷಣೆಯನ್ನು  ಸುಪ್ರೀಂ ಕೋರ್ಟ್ ಅನುಮೋದಿಸಿದೆ ಎಂದು ಪಕ್ಷದ ನಾಯಕರು ಎಲ್ಲಿಯೂ ಹೇಳಿಲ್ಲ. ರಾಜಕೀಯ ಪ್ರಚಾರ ಘೋಷಣೆಯನ್ನು ಪಕ್ಷ   ಕಳೆದ ಒಂದೂವರೆ ವರ್ಷದಿಂದ ಬಳಸುತ್ತಿದ್ದು, ಭವಿಷ್ಯದಲ್ಲೂ  ಘೋಷಣೆಯನ್ನು ಮುಂದುವರಿಸಲಾಗುವುದು ಎಂದು ಪಕ್ಷದ ವಕ್ತಾರ ಅಭಿಷೇಕ್ ಮನುಸಿಂಘ್ವಿ  ಮಂಗಳವಾರ ಸ್ಪಷ್ಟಪಡಿಸಿದ್ದಾರೆ. 
 ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, “ಚೌಕಿದಾರ್ ಛೋರ್ ಹೈ”  ಘೋಷಣೆಯನ್ನು ಕಾಂಗ್ರೆಸ್ ನಾಯಕರು ಕಳೆದ ಒಂದೂವರೆ ವರ್ಷದಿಂದ ಬಳಸುತ್ತಿದ್ದಾರೆ.  ಚೌಕಿದಾರ್ ಚೋರ್ ಹೈ  ಎಂಬುದನ್ನು  ಸುಪ್ರೀಂ ಕೋರ್ಟ್ ಹೇಳಿದೆ ಎಂದು  ನಾವು ಉದ್ದೇಶ ಪೂರ್ವಕವಾಗಿ ಎಲ್ಲೂ ಹೇಳಿಲ್ಲ ಎಂದು ಏಐಸಿಸಿ ರಾಹುಲ್ ಗಾಂಧಿ ಅಪೆಕ್ಸ್ ಕೋರ್ಟ್ಗೆ ವಿವರಣೆ ನೀಡಿದ್ದಾರೆ ಎಂದರು.
ಈ ಘೋಷಣೆ ಹೊಸದೇನು ಅಲ್ಲ, ಹಳೆಯದು. ಇದು ಸಂಪೂರ್ಣ ರಾಜಕೀಯ ಪ್ರಚಾರದ ತಂತ್ರವಾಗಿದ್ದು, ಅದನ್ನು ಭವಿಷ್ಯದಲ್ಲೂ ಮುಂದುವರಿಸಲಿದೆ ಎಂದು ಸಿಂಘ್ವಿ ಸ್ಪಷ್ಟಪಡಿಸಿದರುಸುಪ್ರೀಂ ಕೋರ್ಟ್ ಸೂಚನೆ ನೀಡಿದ ಕಾರಣ ರಾಹುಲ್ ಗಾಂಧಿ ವಿವರಣೆ ನೀಡಿದ್ದಾರೆ. ತಮ್ಮ ಪ್ರಮಾದವನ್ನು ಒಪ್ಪಿಕೊಂಡಿದ್ದಾರೆ. ಆದರೆ, ಅವರು  ರಫೇಲ್  ವಿಚಾರದಲ್ಲಿ ತಮ್ಮ ನಿಲುವು ಬದಲಾಯಿಸಿಲ್ಲ ಎಂದು ಸ್ಪಷ್ಟಪಡಿಸಿದರು. 
ಬಿಜೆಪಿ ಸಹ ಈ ವಿಷಯವನ್ನು  ಚುನಾವಣಾ ಲಾಭಗಳಿಗೆ ಬಳಸಿಕೊಳ್ಳುವ ಮೂಲಕ ರಾಜಕೀಕರಣಗೊಳಿಸುತ್ತಿದೆ ಎಂಬ ಅಂಶವನ್ನು  ಪಕ್ಷ ನ್ಯಾಯಾಲಯದ ಗಮನಕ್ಕೆ ತಂದಿದೆ ಎಂದು ಸಿಂಘ್ವಿ ಹೇಳಿದರು
ಈ ವಿಷಯವನ್ನು ಕೊನೆಗೊಳಿಸಬೇಕೆಂದು ನ್ಯಾಯಾಲಯವನ್ನು ಕಾಂಗ್ರೆಸ್ ಕೋರಿದ್ದಾಗಿ. ಆದರೆ, ಇದನ್ನು ನ್ಯಾಯಾಲಯ ತಾನಾಗಿಯೇ ಎತ್ತಿಲ್ಲ. ಈ ವಿಷಯ ಕುರಿತು  ಬುಧವಾರ ಮತ್ತೊಮ್ಮೆ ನ್ಯಾಯಾಲಯದ ಮುಂದೆ ಹಾಜರಾಗುವುದಾಗಿ  ಸಿಂಘ್ವಿ ಹೇಳಿದರು.
ರಾಹುಲ್ ಗಾಂಧಿ ಅವರ ಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿದ ನಂತರ ಮುಂದಿನ ವಾರ ಹಾಜರಾಗುವಂತೆ, ಕೋರ್ಟ್ ಸೂಚನೆನೀಡಿದೆಯೇ  ಎಂಬ ಮಾಧ್ಯಮಗಳ  ಪ್ರಶ್ನೆಗೆ,  ರಾಹುಲ್ ಗಾಂಧಿ  ಬಿಹಾರದಲ್ಲಿ  ಚೌಕಿದಾರ್ ಛೋರ್ ಹೈ ಎಂದು ಹೇಳಿಕೆ ನೀಡಿದ್ದರು.ಈ ಆಧಾರದಮೇಲೆ  ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿ ಅವರಿಂದ  ವಿವರಣೆ ಕೇಳಿತ್ತು ಎಂದು ಸಿಂಘ್ವಿ ಉತ್ತರಿಸಿದರು. ರಾಜಕೀಯ ಘೋಷಣೆಯನ್ನು,  ಪ್ರಚಾರಕ್ಕಾಗಿ ಮುಂದೆಯೂ ಬಳಸಲಾಗುವುದು ಎಂದು ತಮ್ಮ ವಿವರಣೆಯಲ್ಲಿ ರಾಹುಲ್ ನ್ಯಾಯಾಲಯಕ್ಕೆ  ತಿಳಿಸಿದ್ದಾರೆ. ಆದರೆ, ನ್ಯಾಯಾಲಯ ತೀರ್ಪನ್ನು  ದುರುಪಯೋಗಪಡಿಸಿಕೊಳ್ಳುವ ಉದ್ದೇಶ ಹೊಂದಿರಲಿಲ್ಲ ಎಂದು  ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com