ಕಾಂಗ್ರೆಸ್ ಅಧಿಕಾರಕ್ಕೇರಿದರೆ ಸರ್ಕಾರಿ ನೇಮಕಾತಿ ಪರೀಕ್ಷಾ ಶುಲ್ಕ ರದ್ದು: ರಾಹುಲ್ ಗಾಂಧಿ

ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದಾದರೆ ಸರ್ಕಾರಿ ಉದ್ಯೋಗಕ್ಕೆ ಪರಿಕ್ಷೆ ಬರೆಯುವವರ ಪರೀಕ್ಷಾ ಶುಲ್ಕ ರದ್ದುಪಡಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಸೀತಾಪುರ್(ಉತ್ತರ ಪ್ರದೇಶ): ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದಾದರೆ ಸರ್ಕಾರಿ ಉದ್ಯೋಗಕ್ಕೆ ಪರಿಕ್ಷೆ ಬರೆಯುವವರ ಪರೀಕ್ಷಾ ಶುಲ್ಕ ರದ್ದುಪಡಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಯಾವುದೇ ಸರ್ಕಾರಿ ಹುದ್ದೆಗೆ ಪರೀಕ್ಷೆಗಾಗಿ ಯುವಕರು ಅರ್ಜಿ ಹಾಕಿದ್ದರೆ ಅಂತಹಾ ಯುವಕರು ಅರ್ಜಿ ಶುಲ್ಕ, ಪರೀಕ್ಷಾ ಶುಲ್ಕ ತೆರಬೇಕು.ಆದರೆ ನಾನು ಈ ಕುರಿತು ಮಹತ್ವದ ನಿರ್ಧಾರಕ್ಕೆ ಬಂದಿದ್ದು ಯಾವುದೇ ಯುವಕ, ಯುವತಿಯರು ಇಂತಹಾ ಪರೀಕ್ಷಾ ಶುಲ್ಕ ಪಾವತಿಸಬಾರದು, ಅರ್ಜಿ ಶುಲ್ಕ ಎಂಬ ಪದ್ದತಿಯನ್ನು ರದ್ದುಗೊಳಿಸಲು ನಾನು ನಿರ್ಧರಿಸಿದ್ದೇನೆ. ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 
ಉತ್ತರ ಪ್ರದೇಶದ ಸೀತಾಪುರದಲ್ಲಿ ರಾಹುಲ್ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಹೆಚ್ಚುತ್ತಿರುವ ಇಂಧನ ಬೆಲೆಗಳನ್ನು ಪ್ರಸ್ತಾಪಿಸಿ ಬಿಜೆಪಿಗೆ ಟಾಂಗ್ ನೀಡಿದ ರಾಹುಲ್ ಪೆಟ್ರೋಲ್ ಬೆಲೆ ಕುಸಿಯುತ್ತಿದೆ, ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ಬ್ಯಾರಲ್ ಗೆ 140 ಡಾಲರ್ ಇತ್ತು, ಈಗ ಅದು 70 ಡಾಲರ್ ಇದೆ. ಚೌಕಿದಾರ್ (ನರೇಂದ್ರ ಮೋದಿ) ಹಣದುಬ್ಬರವನ್ನು ನಿಯಂತ್ರಿಸಿದ್ದಾಗಿ ಹೇಳಿಕೊಳ್ಳುತ್ತಾರೆ. ಭಾರತದಲ್ಲಿ, ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದು ಇದರುಇಂದ ಕೇವಲ ಹದಿನೈದು ಜನ ಲಾಭಪಡೆಯುತ್ತಿದ್ದಾರೆ. ನಿಮ್ಮ ಪಾಕೆಟ್ ನಿಂದ ಹಣ ಕಸಿದುಕೊಳ್ಳಲಾಗಿದೆ.
ಕನಿಷ್ಟ ಆದಾಯ ಖಾತರಿ ಯೋಜನೆಯಾದ ":ನ್ಯಾಯ್" ಬಗೆಗೆ ರಾಹುಲ್ ವಿವರಿಸಿದ್ದಾರೆ.  "5 ಕೋಟಿ ಜನರ ಬ್ಯಾಂಕಿನ ಖಾತೆಗಳಿಗೆ ನ್ಯಾಯ್ ಯೋಜನೆ ಹಣ ಪಾವತಿಯಾಗಲಿದೆ. 25 ಕೋಟಿ ಜನರು ಇದನ್ನು ಬಳಸಿ ಬಟ್ಟೆ, ಬೂಟುಗಳು, ಮೊಬೈಲ್ ಮುಂತಾದ ವಸ್ತು ಖರೀದಿಸಲಿದ್ದಾರೆ. ಅಂಗಡಿಗಳಲ್ಲಿ ಮತ್ತೆ ಸರಕುಗಳ ಮಾರಾಟ ನಡೆಯಲಿದೆ. ಕಾರ್ಖಾನೆಗಳಲ್ಲಿನ ಬೇಡಿಕೆಗಳು ಹೆಚ್ಚಾಗುತ್ತದೆ ಸೀತಾಪುರದ ಯುವಕರಿಗೆ ಉದ್ಯೋಗ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com