ಕಾಂಗ್ರೆಸ್ ಗೆ ಸುಳ್ಳು ಹೇಳುವ ಚಾಳಿ ಇದೆ: 6 ಸರ್ಜಿಕಲ್ ದಾಳಿ ಬಗ್ಗೆ ವಿಕೆ ಸಿಂಗ್ ವ್ಯಂಗ್ಯ

ತಾವು ಸೇನಾ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಯಾವುದೇ ಸರ್ಜಿಕಲ್ ದಾಳಿ ನಡೆದಿಲ್ಲ ಎಂದಿರುವ ಕೇಂದ್ರ ಸಚಿವ ವಿ.ಕೆ ಸಿಂಗ್ ಅವರು, ಕಾಂಗ್ರೆಸ್‌ಗೆ ಸುಳ್ಳು...

Published: 04th May 2019 12:00 PM  |   Last Updated: 04th May 2019 07:54 AM   |  A+A-


Union Minister Gen VK Singh mocks Cong for claiming six surgical strikes, says party has a habit of lying

ವಿಕೆ ಸಿಂಗ್

Posted By : LSB LSB
Source : ANI
ನವದೆಹಲಿ: ತಾವು ಸೇನಾ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಯಾವುದೇ ಸರ್ಜಿಕಲ್ ದಾಳಿ ನಡೆದಿಲ್ಲ ಎಂದಿರುವ ಕೇಂದ್ರ ಸಚಿವ ವಿ.ಕೆ ಸಿಂಗ್ ಅವರು, ಕಾಂಗ್ರೆಸ್‌ಗೆ ಸುಳ್ಳು ಹೇಳುವ ಚಾಳಿ ಇದೆ ಎಂದು ವ್ಯಂಗ್ಯವಾಡಿದ್ದಾರೆ.

ನಾನು ಸೇನಾ ಮುಖ್ಯಸ್ಥನಾಗಿದ್ದಾಗ ನನಗೆ ತಿಳಿಯದೇ 'ಸರ್ಜಿಕಲ್ ದಾಳಿ' ಯಾವಾಗ ನಡೆಯಿತು ಅಂತ ತಿಳಿಸುವಿರಾ? ಈಗ ಇನ್ನೊಂದು ಹೊಸ ಕತೆ ಕಟ್ಟಲು ನೀವು ಯಾರನ್ನಾದರೂ ನೇಮಿಸಿಕೊಳ್ಳುತ್ತೀರಿ ಅಂತ ನನಗೆ ಗೊತ್ತು' ಎಂದು ವಿ.ಕೆ. ಸಿಂಗ್ ಟ್ವೀಟ್ ಮಾಡಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಆರು ಬಾರಿ ಸರ್ಜಿಕಲ್ ದಾಳಿ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಹಿನ್ನೆಲೆಯಲ್ಲಿ ವಿಕೆ ಸಿಂಗ್ ಈ ಪ್ರತಿಕ್ರಿಯೆ ನೀಡಿದ್ದಾರೆ. 

ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲೂ ಎರಡು ಬಾರಿ (2000 ಜನವರಿ 21ರಂದು ನೀಲಂ ನದಿಯ ಆಚೆಗೆ ಮತ್ತು 2003ರ ಸೆಪ್ಟೆಂಬರ್ 18ರಂದು ಪೂಂಛ್‌ನಲ್ಲಿ) ಸರ್ಜಿಕಲ್ ದಾಳಿ ನಡೆದಿತ್ತು ಎಂದು ಸಹ ರಾಜೀವ್ ಶುಕ್ಲಾ ಹೇಳಿದ್ದರು.
Stay up to date on all the latest ದೇಶ news with The Kannadaprabha App. Download now
facebook twitter whatsapp